ದೇಶದಲ್ಲಿ ರೆಮ್ ಡಿಸಿವಿರ್ ಇಂಜೆಕ್ಷನ್ ಕೊರತೆಯಿದೆ. ಇಂಜೆಕ್ಷನ್ ಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಮೋಸದ ದಂಧೆ ಹೆಚ್ಚಾಗಿದೆ. ಈ ಮಧ್ಯೆ ಪಂಜಾಬ್‌ನ ಚಮ್ಕೋರ್ ಸಾಹಿಬ್ ಬಳಿಯ ಭಕ್ರ ಕಾಲುವೆಯಲ್ಲಿ ನೂರಾರು ರೆಮ್ಡಿಸಿವಿರ್ ಮತ್ತು ಶ್ವಾಸಕೋಶದ ಸೋಂಕು ತಡೆಗೆ ಬಳಸುವ ಚುಚ್ಚುಮದ್ದು ಸಿಕ್ಕಿದೆ.
ಸರ್ಕಾರಕ್ಕೆ ಪೂರೈಸಬೇಕಾದ 1456 ಚುಚ್ಚುಮದ್ದು, 621 ರಿಮ್ಡಿಸಿವರ್ ಚುಚ್ಚುಮದ್ದು ಮತ್ತು 849 ಲೇಬಲ್ ಮಾಡದ ಚುಚ್ಚುಮದ್ದು ಸೇರಿವೆ. ಇಂಜೆಕ್ಷನ್ ಅಸಲಿಯತ್ತಿನ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.
ರೆಮ್ ಡಿಸಿವಿಆರ್ ಇಂಜೆಕ್ಷನ್ ಬೆಲೆ 5400 ರೂಪಾಯಿ ಎಂದು ಬರೆದಿದೆ. ಉತ್ಪಾದನಾ ದಿನಾಂಕ ಮಾರ್ಚ್ 2021 ಮತ್ತು ಮುಕ್ತಾಯ ದಿನಾಂಕ ನವೆಂಬರ್ 2021 ಎಂದು ಬರೆಯಲಾಗಿದೆ. ಸೆಫೊಪೆರಾಜೋನ್ ಚುಚ್ಚುಮದ್ದಿನ ಉತ್ಪಾದನಾ ದಿನಾಂಕ ಏಪ್ರಿಲ್ 2021 ಮತ್ತು ಮುಕ್ತಾಯ ದಿನಾಂಕ ಮಾರ್ಚ್ 2023 ಆಗಿದೆ. ಇದ್ರ ಮೇಲೆ ನಾಟ್ ಫಾರ್ ಸೇಲ್ ಎಂದು ಬರೆಯಲಾಗಿದೆ.
ಸದ್ಯ ದೇಶದಲ್ಲಿ, ರೆಮ್ಡಿಸಿವಿರ್ ಮತ್ತು ಎದೆಯ ಸೋಂಕಿನ ಚುಚ್ಚುಮದ್ದಿಗೆ ಬೇಡಿಕೆ ಹೆಚ್ಚಿದೆ. ಪಂಜಾಬ್‌ನಲ್ಲಿ ರೆಮ್ ಡಿಸಿವಿರ್ ಮತ್ತು ಇತರ ಔಷಧಿಗಳ ಕೊರತೆ ಇದೆ.