alex Certify ಬಿಹಾರವಾಯ್ತಾ ಕರ್ನಾಟಕ..? ಬೆಚ್ಚಿಬೀಳಿಸುವಂತಿದೆ RTI ಕಾರ್ಯಕರ್ತರ ಮೇಲಿನ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರವಾಯ್ತಾ ಕರ್ನಾಟಕ..? ಬೆಚ್ಚಿಬೀಳಿಸುವಂತಿದೆ RTI ಕಾರ್ಯಕರ್ತರ ಮೇಲಿನ ದಾಳಿ

ಬೆಂಗಳೂರು: ರಾಜ್ಯದಲ್ಲಿ ಆರ್.ಟಿ.ಐ. ಕಾರ್ಯಕರ್ತರಿಬ್ಬರ ಮೇಲೆ ದಾಳಿ ನಡೆಸಲಾಗಿದೆ. ಹರಪನಹಳ್ಳಿಯಲ್ಲಿ ಆರ್.ಟಿ.ಐ. ಕಾರ್ಯಕರ್ತನನ್ನು ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿದ್ದು, ರಾಮನಗರದಲ್ಲಿ ಆರ್.ಟಿ.ಐ. ಕಾರ್ಯಕರ್ತನ ಕೈ,ಕಾಲು ಕತ್ತರಿಸಿ ಹಾಕಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಆರ್.ಟಿ.ಐ. ಕಾರ್ಯಕರ್ತ ಶ್ರೀಧರ್(38) ಅವರನ್ನು ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ಥಳಿಸಿ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿದೆ. ಹರಪನಹಳ್ಳಿಯ ಎಡಿಬಿ ಕಾಲೇಜಿನ ಸಮೀಪ ಶ್ರೀಧರ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದ್ದು, ತಲೆ, ಕುತ್ತಿಗೆ ಭಾಗಕ್ಕೆ ಹೊಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಶ್ರೀಧರ್ ಮೃತಪಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ಅಕ್ರಮಗಳ ಬಯಲಿಗೆಳೆದು ಶ್ರೀಧರ್ ದೂರು ಸಲ್ಲಿಸಿದ್ದರು. ಅವರ ಹತ್ಯೆ ಹರಪನಹಳ್ಳಿ ನಾಗರಿಕರಲ್ಲಿ ಆತಂಕ ತಂದಿದೆ.

ಇನ್ನು ರಾಮನಗರ ಜಿಲ್ಲೆಯ ತಾವರೆಕೆರೆಯಲ್ಲಿ ಆರ್.ಟಿ.ಐ. ಕಾರ್ಯಕರ್ತ ವೆಂಕಟೇಶ್(43) ಅವರ ಮೇಲೆ ದುಷ್ಕರ್ಮಿಗಳು ಗುರುವಾರ ದಾಳಿ ನಡೆಸಿದ್ದಾರೆ. ಕೈಕಾಲುಗಳನ್ನು ಕತ್ತರಿಸಿ ವೆಂಕಟೇಶ್ ಅವರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ. ವೆಂಕಟೇಶ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುಂಡಾಗಿದ್ದ ಕೈ,ಕಾಲುಗಳನ್ನು ಜೋಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...