
ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ ಮಾಡಲಾಗಿದೆ. ಅಶೋಕನಗರದ ಫುಟ್ಬಾಲ್ ಸಂಸ್ಥೆ ಆವರಣದಲ್ಲಿ ಘಟನೆ ನಡೆದಿದೆ. 30 ವರ್ಷದ ಅರವಿಂದ್ ಬರ್ಬರವಾಗಿ ಹತ್ಯೆಗೀಡಾದ ರೌಡಿಶೀಟರ್ ಎಂದು ಹೇಳಲಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಸಾಧ್ಯತೆ ಇದೆ. ರಾಜ್ಯ ಫುಟ್ಬಾಲ್ ಸಂಸ್ಥೆ ಅಧೀನದಲ್ಲಿರುವ ಪುಟ್ಬಾಲ್ ತಂಡವೊಂದರ ಮ್ಯಾನೇಜರ್ ಆಗಿದ್ದ ಅರವಿಂದ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಅರವಿಂದ್ ಕ್ರೀಡಾಂಗಣದ ಕೊಠಡಿಗೆ ಹೋಗಿದ್ದು, ಅಲ್ಲೇ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.