
ಕಲಬುರಗಿ: ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ಅನ್ಯಕೋಮಿನ ಬಾಲಕಿ ಪ್ರೀತಿಸುತ್ತಿದ್ದ ಬಾಲಕನಿಗೆ ಚಿತ್ರಹಿಂಸೆ ನೀಡಿ ಮರ್ಮಾಂಗ ಕತ್ತರಿಸಿದ ಮಾಡಲಾಗಿದೆ.
ನರಿಬೋಳ ಗ್ರಾಮದ 15 ವರ್ಷದ ಬಾಲಕ ಅನ್ಯಕೋಮಿನ ಬಾಲಕಿಯನ್ನು ಪ್ರೀತಿಸುತ್ತಿದ್ದ. ಬಾಲಕಿಯ ತಾಯಿ ಮತ್ತು ಆಕೆಗೆ ಪರಿಚಯದವನಾಗಿದ್ದ ಮಹಿಬೂಬ್ ಎಂಬಾತ ಅನೇಕ ಬಾರಿ ಬಾಲಕನಿಗೆ ಬುದ್ಧಿವಾದ ಹೇಳಿದ್ದರೂ, ಬಾಲಕ ಕೇಳಿರಲಿಲ್ಲ.
ಮೂರು ದಿನಗಳ ಹಿಂದೆ ಬಾಲಕನನ್ನು ಅಪಹರಿಸಿದ ಮಹಿಬೂಬ್ ಮರ್ಮಾಂಗ ಕತ್ತರಿಸಿ ಮೃತದೇಹವನ್ನು ಭೀಮಾನದಿಗೆ ಎಸೆದಿದ್ದಾನೆ. ಕಾರ್ಮಿಕರು ಚೀಲ ತೇಲಿ ಬಂದಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪರಿಶೀಲನೆ ನಡೆಸಿದಾಗ ಬಾಲಕನ ಮೃತದೇಹ ಕಂಡು ಬಂದಿದೆ.
ಮಹಿಬೂಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಬಾಲಕನ ಕುಟುಂಬದವರು ಮಗ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಬಾಲಕನ ಮೃತದೇಹ ಕಂಡು ಬಂದ ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.