ತುಮಕೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಹೊರವಲಯದ ಗಂಗಸಂದ್ರ ನಿವಾಸಿಯಾಗಿದ್ದ ವ್ಯಕ್ತಿ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದ. ಆತ ಕುಡಿದು ಮನೆಗೆ ಬರುವುದು ತಡವಾದರೆ ಪತ್ನಿಯೇ ಹೋಗಿ ಕರೆದುಕೊಂಡು ಬರುತ್ತಿದ್ದಳು. ಹೀಗಿರುವಾಗ ಜನವರಿ 15 ರಂದು ಮನೆಯಿಂದ ಹೊರಗೆ ಹೋಗಿದ್ದ ಆತ ಕೊಲೆಯಾಗಿದ್ದ. ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೃತನ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿದ್ದಾರೆ. ಗಂಡ ಮದ್ಯವ್ಯಸನಿಯಾಗಿದ್ದರಿಂದ ಪತ್ನಿ ದಾರಿತಪ್ಪಿದ್ದು, ತನ್ನ ಊರಿನವನೇ ಆಗಿದ್ದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ಗಂಡನಿಗೆ ಗೊತ್ತಾಗಿದ್ದರಿಂದ ಪ್ರಿಯಕರನಿಗೆ ಕರೆಮಾಡಿ ಗಂಡನನ್ನು ಕೊಲೆ ಮಾಡುವಂತೆ ತಿಳಿಸಿದ್ದಾಳೆ. ತನಿಖೆ ಕೈಗೊಂಡ ಪೊಲೀಸರು ಮೃತನ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.