alex Certify ಕಾಮುಕ ತಂದೆ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟ ವಿದ್ಯಾರ್ಥಿನಿ, ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮುಕ ತಂದೆ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟ ವಿದ್ಯಾರ್ಥಿನಿ, ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ತಂದೆ ಪ್ರತಿದಿನ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಸ್ನೇಹಿತರು ಇಂತಹ ಕೃತ್ಯವೆಸಗಿದ್ದಾರೆ. ಆರೋಪಿತರೆಲ್ಲರೂ ಅಪ್ರಾಪ್ತರಾಗಿದ್ದಾರೆ. ಅಟ್ಟೂರು ಲೇಔಟ್ ನಲ್ಲಿ ನಿವಾಸಿ ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್(45) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.

ಮೃತನ ಪುತ್ರಿ ಸೇರಿದಂತೆ ನಾಲ್ವರು ಪಿಯುಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕೈಗೊಳ್ಳಲಾಗಿದೆ. ಜಿಕೆವಿಕೆ ಯಲ್ಲಿ ದೀಪಕ್ ಕುಮಾರ್ ಸಿಂಗ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತನ ಮೊದಲ ಪತ್ನಿ ಬಿಹಾರದಲ್ಲಿದ್ದು, ಕಲಬುರಗಿಯ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ ದೀಪಕ್, ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದ.

ದೀಪಕ್ ಕುಮಾರ್ ಸಿಂಗ್ ಪಿಯುಸಿ ಓದುತ್ತಿದ್ದ ಹಿರಿಯ ಪತ್ರಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆಯಾಗಿತ್ತು. ಇದನ್ನು ವಿದ್ಯಾರ್ಥಿನಿ ತನ್ನ ಸ್ನೇಹಿತರಿಗೆ ಹೇಳಿ ಕಣ್ಣೀರಿಟ್ಟಿದ್ದರು. ತಾಯಿ ಕಲಬುರಗಿಗೆ ಹೋಗಿದ್ದ ವೇಳೆ ತಂದೆ ಮನೆಯಲ್ಲಿ ಒಬ್ಬರೇ ಇರುವ ಬಗ್ಗೆ ಸ್ನೇಹಿತರಿಗೆ ಮಾಹಿತಿ ನೀಡಿದ್ದಳು. ಭಾನುವಾರ ತಡರಾತ್ರಿ ಮನೆಗೆ ಬಂದ ವಿದ್ಯಾರ್ಥಿನಿಯ ಸ್ನೇಹಿತರು ದೀಪ ಕುಮಾರ್ ಸಿಂಗ್ ಅನ್ನು ಕೊಲೆ ಮಾಡಿದ್ದಾರೆ. ದೀಪಕ್ ಕುಮಾರ್ ಸಿಂಗ್ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...