ನವದೆಹಲಿ: ಇ –ವಾಹನ ದರ 2 ವರ್ಷಗಳಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳಲ್ಲಿ ಇ -ವಾಹನಗಳ ದರ ಕಡಿಮೆಯಾಗಲಿದೆ. ಇ -ವಾಹನಗಳಲ್ಲಿ ಬ್ಯಾಟರಿ ವೆಚ್ಚ ಜಾಸ್ತಿ ಇರುತ್ತದೆ. ಇಂತಹ ವಾಹನ ಉತ್ಪಾದಕರು ಬ್ಯಾಟರಿಗಳನ್ನು ಕೆಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ದರ ದುಬಾರಿಯಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಉತ್ಪಾದನೆ ಸಾಧ್ಯವಾಗಲಿದ್ದು, ಬ್ಯಾಟರಿ ವೆಚ್ಚ ಕಡಿಮೆಯಾಗಿ ಕೈಗೆಟುಕುವ ದರದಲ್ಲಿ ಇ -ವಾಹನ ಇರಲಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ವಾಹನ ದರಕ್ಕೆ ಹೋಲಿಸಿದರೆ ಇ – ವಾಹನ ದರ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇ – ವಾಹನಗಳ ದರ ಕಡಿಮೆಯಾಗಲಿದ್ದು, ಪೆಟ್ರೋಲ್, ಡೀಸೆಲ್ ವಾಹನಗಳ ದರಕ್ಕೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ.