alex Certify ಸಲುಗೆಯಿಂದಿದ್ದ ಪತ್ನಿ ಅಕ್ಕನ ಮನೆಗೆ ಬಂದ ಬಾವನಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲುಗೆಯಿಂದಿದ್ದ ಪತ್ನಿ ಅಕ್ಕನ ಮನೆಗೆ ಬಂದ ಬಾವನಿಂದ ಘೋರ ಕೃತ್ಯ

ಬೆಂಗಳೂರು: ಆರ್.ಟಿ. ನಗರದ ನೃಪತುಂಗ ಲೇಔಟ್ ನಲ್ಲಿ ನಡೆದಿದ್ದ ಬಾರ್ ಡ್ಯಾನ್ಸರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವನನ್ನು ಪೊಲೀಸರು ಬಂಧಿಸಿದ್ದಾರೆ.

ಜಾಲಹಳ್ಳಿಯ ನವಾಜ್ ಪಾಶ(28) ಬಂಧಿತ ಆರೋಪಿಯಾಗಿದ್ದಾನೆ. ಮಾರ್ಚ್ 26 ರಂದು ರಾತ್ರಿ ಬಾರ್ ಡ್ಯಾನ್ಸರ್ ಜಾರಾ(28) ಮನೆಗೆ ಬಂದಿದ್ದ ಆರೋಪಿ ಆಕೆಯೊಂದಿಗೆ ಜಗಳವಾಡಿ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಛತ್ತೀಸಗಢದ ಜಾರಾಗೆ ತಂದೆ-ತಾಯಿ ಇಲ್ಲ. ಬೆಂಗಳೂರಿಗೆ ಬಂದಿದ್ದ ಆಕೆ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರು ಸಹೋದರರು ಜಾಲಹಳ್ಳಿಯಲ್ಲಿ ನೆಲೆಸಿದ್ದು, ಜಾರಾ ಆರು ತಿಂಗಳ ಹಿಂದೆ ನವಾಜ್ ಪಾಶ ಜೊತೆಗೆ ತಂಗಿಯ ಮದುವೆ ಮಾಡಿದ್ದರು.

ಇತ್ತೀಚೆಗೆ ಜಾರಾಗೆ ಮದುವೆ ನಿಶ್ಚಯವಾಗಿತ್ತು. ಇದರಿಂದ ನವಾಜ್ ಪಾಶ ಜಗಳವಾಡುತ್ತಿದ್ದ. ಜಾರಾ ಸಹೋದರಿಯನ್ನು ಮದುವೆಯಾಗುವ ಮೊದಲಿನಿಂದಲೂ ಆಕೆಯೊಂದಿಗೆ ನವಾಜ್ ಪಾಶ ಅನ್ಯೋನ್ಯವಾಗಿದ್ದ. ಜಾರಾಗೆ ಮದುವೆ ನಿಶ್ಚಯವಾಗಿರುವ ವಿಚಾರಕ್ಕೆ ಮಾರ್ಚ್ 26 ರಂದು ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮರುದಿನ ಪ್ರಕರಣ ಬೆಳಕಿಗೆ ಬಂದಿದ್ದು, ಆರ್.ಟಿ. ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಆತನನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...