
ಬೆಂಗಳೂರು: ಪತ್ನಿಯ ಹತ್ಯೆಗೈದು ಸ್ಟ್ರೋಕ್ ಎಂದಿದ್ದ ಪತಿಯ ನಾಟಕ ಬಯಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೃಹಿಣಿ ಮೃತಪಟ್ಟ ನಂತರ ಸಾವಿನ ರಹಸ್ಯ ಬಯಲಾಗಿದೆ. ಸಾನಿಯಾ ಮೃತಪಟ್ಟ ಗೃಹಿಣಿ. ಅಜಿತ್ ಕೊಲೆ ಆರೋಪಿಯಾಗಿದ್ದಾನೆ. ಜೂನ್ 29 ರಂದು ಪತಿ ಅಜಿತ್ ಮತ್ತು ಸಾನಿಯಾ ಅವರ ಮಧ್ಯೆ ಜಗಳವಾಗಿದ್ದು, ಜಗಳದ ಸಂದರ್ಭದಲ್ಲಿ ಪತ್ನಿಯ ತಲೆಗೆ ಅಜಿತ್ ಬಲವಾಗಿ ಹೊಡೆದಿದ್ದಾನೆ. ನಂತರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಟ್ರೋಕ್ ಎಂದು ತಿಳಿಸಿದ್ದಾನೆ.
ಅಂತ್ಯಕ್ರಿಯೆಗೆ ಬಂದಿದ್ದ ಸಾನಿಯಾ ತಾಯಿಗೆ ಅನುಮಾನ ಬಂದು ಮೈಕೋಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾಗಿರುವುದು ಗೊತ್ತಾಗಿದೆ. ಅಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.