
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ ಹತ್ಯೆ ಪ್ರಕರಣದಲ್ಲಿ ಕೊಲೆಗೆ ಸಹಕರಿಸಿದ್ದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿರಾಜ್ ಎರಡನೇ ಪತ್ನಿ ನೇತ್ರಾ ಪ್ರಿಯಕರ ಭರತ್ ಮತ್ತು ನೇತ್ರಾ ಅಕ್ಕನ ಮಗ ವಿಜಯ ಬಂಧಿತ ಬಂಧಿತ ಆರೋಪಿಗಳು. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಸ್ವಾಮಿರಾಜ್ ಹತ್ಯೆ ಮಾಡಿದ್ದ ನೇತ್ರಾ ಪೊಲೀಸರಿಗೆ ಶರಣಾಗಿದ್ದಳು.
ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್(46) ಹತ್ತಿರದ ಸಂಬಂಧಿಯೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿರುವುದಾಗಿ ನೇತ್ರಾ ಪೊಲೀಸರಿಗೆ ಹೇಳಿಕೆ ನೀಡಿದ್ದಳೆನ್ನಲಾಗಿದೆ.
ಸ್ವಾಮಿರಾಜ್ ಎರಡನೇ ಪತ್ನಿಯಾಗಿದ್ದ ನೇತ್ರಾ ಆಸ್ತಿಗಾಗಿ ಕೊಲೆ ಮಾಡಿಡುವುದಾಗಿ ಮೊದಲ ಪತ್ನಿ ದೂರು ನೀಡಿದ್ದರು.