ರಕ್ಷಕರೇ ರಾಕ್ಷಸರಾದ್ರೆ ಸುರಕ್ಷತೆ ಎಲ್ಲಿ ಸಿಗಲು ಸಾಧ್ಯ? ರಾಜಸ್ತಾನದ ಅಲ್ವರ್ ನಲ್ಲಿ ನ್ಯಾಯ ಕೇಳಿ ಬಂದ ಮಹಿಳೆ ಮೇಲೆ ಎಸ್ ಐ ಅತ್ಯಾಚಾರವೆಸಗಿದ್ದಾನೆ. ಠಾಣೆಗೆ ಬಂದ ಮಹಿಳೆಯನ್ನು ರೂಮೊಂದಕ್ಕೆ ಕರೆದೊಯ್ದ ಎಸ್ ಐ ಅತ್ಯಾಚಾರವೆಸಗಿದ್ದಾನೆ. ಸತತ ಮೂರು ದಿನಗಳ ಕಾಲ ಎಸ್ ಐ ರಾಕ್ಷಸ ರೂಪ ತೋರಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾಳೆ.
24 ವರ್ಷದ ಮಹಿಳೆಯ ಮೇಲೆ 54 ವರ್ಷದ ಎಸ್ ಐ ಅತ್ಯಾಚಾರವೆಸಗಿದ್ದಾನೆ. ಎಸ್ ಐ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಮಾರ್ಚ್ 2ರಂದು ಪತಿ ವಿರುದ್ಧ ದೂರು ನೀಡಲು ಪೀಡಿತೆ ಠಾಣೆಗೆ ಹೋಗಿದ್ದಳಂತೆ. ಪತಿ ಆಕೆಗೆ ವಿಚ್ಛೇದನ ನೀಡಲು ಮುಂದಾಗಿದ್ದನಂತೆ. ಆದ್ರೆ ಪೀಡಿತೆಗೆ ವಿಚ್ಛೇದನ ನೀಡುವುದು ಇಷ್ಟವಿರಲಿಲ್ಲವಂತೆ. ನ್ಯಾಯಕ್ಕಾಗಿ ಆಕೆ ಪೊಲೀಸ್ ಮೊರೆ ಹೋಗಿದ್ದಳಂತೆ.
ಪತಿ ವಿರುದ್ಧ ತನಿಖೆ ನಡೆಸುವುದಾಗಿ ಆಸೆ ತೋರಿಸಿದ ಎಸ್ ಐ ಭರತ್ ಸಿಂಗ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದನಂತೆ. ಮೂರು ದಿನ ಕಳೆದ್ರೂ ಯಾವುದೇ ವಿಚಾರಣೆ ಕೈಗೆತ್ತಿಕೊಳ್ಳದ ಕಾರಣ ಮಹಿಳೆ ದೂರು ನೀಡಿದ್ದಾಳೆ. ಆದ್ರೆ ಈವರೆಗೂ ಎಸ್ ಐ ಬಂಧನವಾಗಿಲ್ಲವೆಂದು ಮಹಿಳೆ ಆರೋಪಿಸಿದ್ದಾಳೆ.