ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ಬಾಲಿವುಟ್ ನಟಿ ಕಂಗನಾ ರಣಾವತ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ನವರಾತ್ರಿಯ ಶುಭ ಕೋರಿದ್ದಾರೆ.
ನವರಾತ್ರಿಗೆ ಯಾರ್ಯಾರು ಉಪವಾಸ ಕೈಗೊಂಡಿದ್ದೀರಾ..? ನಾನಂತೂ ಉಪವಾಸ ಮಾಡುತ್ತಿದ್ದೇನೆ. ಅಂದ ಹಾಗೆ ನನ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಪಪ್ಪು ಸೇನೆಗೆ ನನ್ನ ಮೇಲೆ ವ್ಯಾಮೋಹವಿದ್ದಂತೆ ಕಾಣ್ತಿದೆ. ನನ್ನ ಮಿಸ್ ಮಾಡ್ಕೋಬೇಡಿ. ಸದ್ಯದಲ್ಲೇ ನಾನು ಬರುತ್ತಿದ್ದೇನೆ ಅಂತಾ ಕ್ಯಾಪ್ಶನ್ ಹಾಕಿದ್ದಾರೆ.
ಕಂಗನಾರ ಇಂತಹದ್ದೊಂದು ಪೋಸ್ಟ್ ಮಾಡ್ತಿದ್ದಂತೆ ಕಾಮೆಂಟ್ ಸೆಕ್ಷನ್ನಲ್ಲಿ ವಾದ – ವಿವಾದಗಳ ಸುರಿಮಳೆಯೇ ಶುರುವಾಗಿದೆ. ಇದರಲ್ಲಿ ಮೆಹೆಂದಿ ರೇಝಾ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆಯುಳ್ಳ ವ್ಯಕ್ತಿಯೊಬ್ಬ ನಿನ್ನನ್ನ ಮಧ್ಯ ರಸ್ತೆಯಲ್ಲಿ ಅತ್ಯಾಚಾರ ಮಾಡಬೇಕು ಅಂತಾ ಬೆದರಿಕೆ ಒಡ್ಡಿದ್ದಾನೆ. ಈ ಕಮೆಂಟ್ ಯಾರೋ ರಿಯಾಕ್ಟ್ ಮಾಡಿದ್ದು ನೀನು ವಕೀಲನಾ ಅಂತಾ ಪ್ರಶ್ನೆ ಮಾಡಿದ್ದಾರೆ.
ಕೆಲ ಹೊತ್ತಿನ ಬಳಕೆ ಕ್ಷಮೆ ಕೇಳಿದ ಮೆಹೆಂದಿ ರೇಝಾ, ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಆಗಿತ್ತು ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಈ ರೀತಿ ಕಮೆಂಟ್ ಹಾಕಿದ ಮೆಹೆಂದಿ ರಾಝಾ ಓಡಿಶಾದ ಝಾರ್ಸ್ಗುಂಡಾ ಜಿಲ್ಲೆಯ ವಕೀಲ ಅಂತಾ ಹೇಳಲಾಗ್ತಿದೆ.