ಅಂದು ಹ್ಯೂಬ್ಲೆಟ್ ವಾಚ್ ವಾಪಸ್ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಇಂದು 14 ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ. “ಸಿದ್ಧಕಲೆ”ಯ ಸುಳ್ಳುಗಳು ವಿಜೃಂಭಿಸಬಹುದು. ಆದರೆ ಸತ್ಯಕ್ಕೆ ಜಯ! “ಉಲ್ಟಾರಾಮಯ್ಯ!!” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ತಪ್ಪೇ ಮಾಡಿಲ್ಲ, ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಎಂದು ಮೊಂಡುತನ ತೋರುತ್ತಿದ್ದ ಸಿಎಂ, ಈಗ “ಮುಡಾ” ಹಗರಣ “ತಮ್ಮ ಬುಡಕ್ಕೆ” ಬರುತ್ತಿದ್ದಂತೆ ಧರ್ಮಪತ್ನಿಯವರ ಹೆಸರಿನಲ್ಲಿ ಅಕ್ರಮವಾಗಿ ಪಡೆದಿರುವ 14 ಸೈಟುಗಳನ್ನು ಸರೆಂಡರ್ ಮಾಡಿದ್ದಾರೆ.
ಇದು ಮುಡಾ ಹಗರಣದ ವಿರುದ್ಧ ಎನ್ ಡಿಎ ಮೈತ್ರಿ ಪಕ್ಷವಾದ ಜೆಡಿಎಸ್ ಮತ್ತು ಬಿಜೆಪಿ ನಡೆಸಿದ “ಮೈಸೂರು ಚಲೋ” ಪಾದಯಾತ್ರಗೆ ಸಿಕ್ಕ ಗೆಲುವು.. ಸ್ವತಃ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸುಳಿ ಬಿಗಿದುಕೊಳ್ಳುತ್ತಿದ್ದಂತೆಯೇ ಅವರಿಗೆ ತಪ್ಪಿನ ಅರಿವಾಗಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಅಂದು ಹ್ಯೂಬ್ಲೆಟ್ ವಾಚ್ ವಾಪಸ್ ಕೊಟ್ಟಿದ್ದ @siddaramaiah ಅವರು
ಇಂದು 14 ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ.#ಕರ್ಮರಿಟರ್ನ್ಸ್“ಸಿದ್ಧಕಲೆ”ಯ ಸುಳ್ಳುಗಳು ವಿಜೃಂಭಿಸಬಹುದು. ಆದರೆ ಸತ್ಯಕ್ಕೆ ಜಯ!
“ಉಲ್ಟಾರಾಮಯ್ಯ!!”
ತಪ್ಪೇ ಮಾಡಿಲ್ಲ, ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಎಂದು ಮೊಂಡುತನ ತೋರುತ್ತಿದ್ದ ಸಿಎಂ, ಈಗ “ಮುಡಾ” ಹಗರಣ “ತಮ್ಮ… pic.twitter.com/wyBqxxYKHu
— Janata Dal Secular (@JanataDal_S) October 1, 2024

