HomeIndiaSHOCKING : ಮತಾಂತರ ಮತ್ತು ಸೆಕ್ಸ್  ರಾಕೆಟ್ ದಂಧೆ : ಇಬ್ಬರು ಸಹೋದರಿಯರು ಅರೆಸ್ಟ್.!

SHOCKING : ಮತಾಂತರ ಮತ್ತು ಸೆಕ್ಸ್  ರಾಕೆಟ್ ದಂಧೆ : ಇಬ್ಬರು ಸಹೋದರಿಯರು ಅರೆಸ್ಟ್.!

ಭೋಪಾಲ್: ಉದ್ಯೋಗ ನೀಡುವ ಆಮಿಷವೊಡ್ಡಿ ಯುವತಿಯರನ್ನು ಸೆಕ್ಸ್ ರಾಕೆಟ್‌ಗೆ ತಳ್ಳುವುದು ಮತ್ತು ಬಲವಂತದ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಅಮ್ರೀನ್ ಮತ್ತು ಆಫ್ರೀನ್ ಎಂಬ ಸಹೋದರಿಯರು ಹಾಗೂ ಅವರ ಸಹಚರ ಚಂದನ್ ಯಾದವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಲಾಲ್, ಚಾನು ಮತ್ತು ಯಾಸಿರ್ ಎಂಬ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.21 ಮತ್ತು 32 ವರ್ಷದ ಇಬ್ಬರು ಮಹಿಳೆಯರು ಬಾಗ್ ಸೇವಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಜಾಲ ಬಯಲಿಗೆ ಬಂದಿದೆ.ಆರ್ಥಿಕವಾಗಿ ಹಿಂದುಳಿದ ಯುವತಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈ ಸಹೋದರಿಯರು, ಮನೆ ಕೆಲಸಕ್ಕೆ 10,000 ರೂ. ಸಂಬಳ, ಉಚಿತ ವಸತಿ ಮತ್ತು ಐಷಾರಾಮಿ ಜೀವನದ ಆಮಿಷವೊಡ್ಡಿ ಕರೆತರುತ್ತಿದ್ದರು.

ಲೈಂಗಿಕ ದೌರ್ಜನ್ಯ: ಕೆಲಸಕ್ಕೆ ಸೇರಿದ ಯುವತಿಯರನ್ನು ಪಬ್ ಮತ್ತು ಪಾರ್ಟಿಗಳಿಗೆ ಕರೆದೊಯ್ದು, ಬಲವಂತವಾಗಿ ಮದ್ಯ ಮತ್ತು ಎಂಡಿ (MD) ಡ್ರಗ್ಸ್ ನೀಡಿ ಶ್ರೀಮಂತ ವ್ಯಕ್ತಿಗಳಿಂದ ಅತ್ಯಾಚಾರ ಮಾಡಿಸಲಾಗುತ್ತಿತ್ತು ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಲವಂತದ ಮತಾಂತರದ ಆರೋಪ:

“ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ, ನೀನೂ ಮುಸ್ಲಿಂ ಆಗು, ನಿನಗೆ ಒಳ್ಳೆಯ ಕುಟುಂಬದಲ್ಲಿ ಮದುವೆ ಮಾಡಿಸುತ್ತೇನೆ” ಎಂದು ಚಂದನ್ ಯಾದವ್ ತನ್ನನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆಯೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ. ನಂತರ ಆಕೆಯನ್ನು ಬುರ್ಖಾ ಧರಿಸುವಂತೆ ಮತ್ತು ನಮಾಜ್ ಮಾಡುವಂತೆ ಬಲವಂತ ಮಾಡಲಾಗಿತ್ತು.ಒಂದು ಕಾಲದಲ್ಲಿ ಭೋಪಾಲ್‌ನ ಅಬ್ಬಾಸ್ ನಗರದ ಸಾಮಾನ್ಯ ಕೊಳಗೇರಿಯಲ್ಲಿ ವಾಸವಿದ್ದ ಈ ಸಹೋದರಿಯರು, ಇತ್ತೀಚೆಗಷ್ಟೇ ಸಾಗರ್ ರಾಯಲ್ ವಿಲ್ಲಾ ಎಂಬ ಅತ್ಯಂತ ಐಷಾರಾಮಿ ಪ್ರದೇಶದ ವಿಲ್ಲಾಕ್ಕೆ ಶಿಫ್ಟ್ ಆಗಿದ್ದರು. ಈ ಅಕ್ರಮ ದಂಧೆಯಿಂದ ಗಳಿಸಿದ ಹಣದಿಂದಲೇ ಅವರು ಈ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸ್ ತನಿಖೆ : ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಹಲವು ಯುವತಿಯರ ಫೋಟೋಗಳಿರುವ ಸಂಶಯಾಸ್ಪದ ವಾಟ್ಸಾಪ್ ಗ್ರೂಪ್‌ಗಳು ಪತ್ತೆಯಾಗಿವೆ. ಈ ಜಾಲವು ಗುಜರಾತ್ ಮತ್ತು ಮುಂಬೈವರೆಗೂ ಹರಡಿರುವ ಸಾಧ್ಯತೆಯಿದ್ದು, ಪೊಲೀಸರು ಅಂತರರಾಜ್ಯ ನೆಟ್‌ವರ್ಕ್ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular