HomeHealthಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದ್ರೆ ಉಂಟಾಗುತ್ತೆ ಅನಾರೋಗ್ಯ

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದ್ರೆ ಉಂಟಾಗುತ್ತೆ ಅನಾರೋಗ್ಯ

ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಇದರಿಂದ ಎಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ.

ಬಾಳೆ ಹಣ್ಣು : ಬಾಳೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಕ್ಯಾಲ್ಷಿಯಮ್ ಮತ್ತು ಮ್ಯಾಗ್ನೀಶಿಯಮ್ ಪ್ರಮಾಣದಲ್ಲಿ ಏರುಪೇರಾಗುತ್ತದೆ.

ಹಾಲು : ಖಾಲಿ ಹೊಟ್ಟೆಯಲ್ಲಿ ಹಾಲನ್ನು ಕುಡಿಯುವುದರಿಂದ ಇದರಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಪ್ರೋಟೀನ್ ಹೊಟ್ಟೆಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಕಫ ಆಗುವ ಸಂಭವ ಕೂಡ ಹೆಚ್ಚು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೆಣಸು : ಗೆಣಸಿನ ಗಡ್ಡೆಯಲ್ಲಿ ಟ್ಯಾನಿನ್ ಮತ್ತು ಪ್ಯಾಕ್ಟೀನ್ ಇರುವುದರಿಂದ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆನೋವು ಬರಬಹುದು.

ಟೊಮೆಟೋ : ಖಾಲಿ ಹೊಟ್ಟೆಯಲ್ಲಿ ಟೊಮೆಟೋ ಸೇವನೆ ಒಳ್ಳೆಯದಲ್ಲ. ಇದರಲ್ಲಿನ ಎಸಿಡ್ ಅಂಶ ಹೊಟ್ಟೆಗೆ ಹಾನಿಯುಂಟು ಮಾಡುವುದಲ್ಲದೇ ಸ್ಟೋನ್ ಸಮಸ್ಯೆ ಕೂಡ ಉಂಟಾಗಬಹುದು.

ಸಕ್ಕರೆ : ಖಾಲಿ ಹೊಟ್ಟೆಗೆ ಸಿಹಿ ವರ್ಜ್ಯ. ಇದರಿಂದ ಸಕ್ಕರೆ ಖಾಯಿಲೆ ಮತ್ತು ಕಣ್ಣಿನ ತೊಂದರೆ ಉಂಟಾಗುವ ಸಂಭವ ಹೆಚ್ಚು.

ಟೀ : ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಒಳಿತಲ್ಲ. ಇದರಲ್ಲಿ ಎಸಿಡ್ ಪ್ರಮಾಣ ಹೆಚ್ಚಿಗೆ ಇರುವುದರಿಂದ ಎಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು.

For Latest News Updates, Join Our Whatsapp Community🚩
RELATED ARTICLES

Most Popular