HomeIndiaಜಿಂಬಾಬ್ವೆ ವಿರುದ್ಧ 4 -1ರಿಂದ ಟಿ20 ಸರಣಿ ಗೆದ್ದ ಭಾರತ

ಜಿಂಬಾಬ್ವೆ ವಿರುದ್ಧ 4 -1ರಿಂದ ಟಿ20 ಸರಣಿ ಗೆದ್ದ ಭಾರತ

ಹರಾರೆ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಭಾನುವಾರ ನಡೆದ ಐದನೇ ಪಂದ್ಯದಲ್ಲಿ ಭಾರತ 42 ರನ್ ಗಳಿಂದ ಜಿಂಬಾಬ್ವೆ ವಿರುದ್ಧ ಜಯ ಸಾಧಿಸಿದೆ. ಆ ಮೂಲಕ ಸರಣಿಯನ್ನು 4 -1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಉಪನಾಯಕ ಸಂಜು ಸ್ಯಾಮ್ಸನ್ 58 ರನ್, ಶಿವಂದುವೆ 26 ರನ್ ಗಳಿಸಿದರು. ಮುಕೇಶ್ ಕುಮಾರ್ ನಾಲ್ಕು ವಿಕೆಟ್ ಪಡೆದರು. ಇವರ ಉತ್ತಮ ಪ್ರದರ್ಶನದಿಂದ ಆತಿಥೇಯ ಜಿಂಬಾಬ್ವೆ ಎದುರಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್ ಗಳಿಂದ ಗೆಲುವು ಸಾಧಿಸಿದೆ.

ಶುಭಮನ್ ಗಿಲ್ ಬಳಗ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶ ಮಾಡಿಕೊಂಡಿದೆ. ಜಿಂಬಾಬ್ವೆ18.3  ಓವರ್ ಗಳಲ್ಲಿ 125 ರನ್ ಗಳಿಸಲಷ್ಟೇ ಶಕ್ತವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2021ರ ನವೆಂಬರ್ ಬಳಿಕ ಟೀಮ್ ಇಂಡಿಯಾ ಆಡಿದ 18 ಟಿ20 ಸರಣಿಗಳಲ್ಲಿ 15ನೇ ಸರಣಿ ಗೆಲುವು ಇದಾಗಿದೆ. ಎರಡು ಸರಣಿಗಳಲ್ಲಿ ಸಮಬಲ ಸಾಧಿಸಿದ್ದು, ಒಂದು ಸರಣಿಯಲ್ಲಿ ಸೋಲು ಕಂಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular