HomeKarnatakaಕೈಗಾ 5, 6ನೇ ಘಟಕ: ಎಷ್ಟು ವಿದ್ಯುತ್ ಉತ್ಪಾದನೆ, ವಿಶೇಷತೆಗಳು

ಕೈಗಾ 5, 6ನೇ ಘಟಕ: ಎಷ್ಟು ವಿದ್ಯುತ್ ಉತ್ಪಾದನೆ, ವಿಶೇಷತೆಗಳು

“ದೇಶವು 2047ಕ್ಕೆ 100 ಗಿಗಾ ವ್ಯಾಟ್ ಅಣುವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು ಇದಕ್ಕಾಗಿ ಎನ್.ಪಿ.ಸಿ.ಎಲ್ ವತಿಯಿಂದ 54 ಗಿಗಾವ್ಯಾಟ್ ಉತ್ಪಾದನೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ” ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ.ಅಜಿತ್ ಕುಮಾರ್ ಮೊಹಂತಿ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಕೈಗಾ 5, 6ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. “ದೇಶವು 100 ಗಿಗಾ ವ್ಯಾಟ್ ಅಣುವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು ಇದಕ್ಕಾಗಿ ನೀರಿನ ಒತ್ತಡದ ರಿಯಾಕ್ಟರ್‌ಗಳು ಮತ್ತು ಹೊಸದಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು ಆರಂಭಿಸುವ ಉದ್ದೇಶವನ್ನು ಹೊಂದಲಾಗಿದೆ” ಎಂದರು.

“ಈಗಾಗಲೇ ಇದರ ಆರಂಭಿಕ ಕಾರ್ಯಗಳು ಪ್ರಾಯೋಗಿಕವಾಗಿ ನಡೆಯುತ್ತಿದ್ದು, ಅಣು ವಿದ್ಯುತ್ ಉತ್ಪಾದನೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ” ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ದೇಶದಲ್ಲಿ ಅಣು ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶವು ಸಂಪೂರ್ಣ ಸ್ವಾವಲಂಬನೆ ಹೊಂದಿದ್ದು, ಆತ್ಮ ನಿರ್ಭರತೆ ಸಾಧಿಸಲಾಗಿದೆ” ಎಂದು ಬಣ್ಣಿಸಿದರು.

“ಕೈಗಾದಲ್ಲಿ ಉದ್ದೇಶಿತ 5 ಮತ್ತು 6ರ ಮೊದಲ ಘಟಕವು ಸುಮಾರು 60 ತಿಂಗಳಲ್ಲಿ ವಿದ್ಯುತ್ ಉತ್ಪಾದನಾ ಹಂತವನ್ನು ಸಾಧಿಸುವ ನಿರೀಕ್ಷೆಯಿದ್ದು, ಮೊದಲ ಬಾರಿಗೆ, ಈ ಯೋಜನೆಯ ನಿರ್ಮಾಣವನ್ನು ಕೆಲವೇ ಮೆಗಾ EPC ಪ್ಯಾಕೇಜ್‌ಗಳನ್ನು (ಉತ್ಪನನ, ಪರಮಾಣು ದ್ವೀಪ, ಟರ್ಬೈನ್ ದ್ವೀಪ ಮತ್ತು ಪರಮಾಣು ಉಪಕರಣಗಳಂತಹವು) ಒಳಗೊಂಡ ನವೀನ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ” ಎಂದರು.

“ಇದು ಯೋಜನೆಯನ್ನು ವೇಗವಾಗಿ ಕಾರ್ಯಗತಗೊಳಿಸಲು ಮತ್ತು ವಿವಿಧ ಪ್ಯಾಕೇಜ್ಗಳ ನಡುವೆ ಸಮನ್ವಯ ಸಾಧಿಸಿ, ಅತೀ ಕಡಿಮೆ ಸಮಯದಲ್ಲಿ ಮತ್ತು ವೆಚ್ಚದಲ್ಲಿ ಯೋಜನೆಯ ಕಾರ್ಯಾನ್ವಯಕ್ಕೆ ಅನುವು ಮಾಡಿಕೊಡುತ್ತದೆ” ಎಂದು ತಿಳಿಸಿದರು.

“ಕೈಗಾದ 5 ಮತ್ತು 6 ನೇ ಘಟಕಗಳು ಅತ್ಯಾಧುನಿಕ, ಭಾರತೀಯ ತಂತ್ರಜ್ಞಾನದ 700 MW PHWR ಗಳಾಗಿದ್ದು, ಇವು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿವೆ ಮತ್ತು ವಿಶ್ವದ ಅತ್ಯಂತ ಸುರಕ್ಷಿತವಾದ ಅಣುಸ್ಥಾವರಗಳ ಸಾಲಿಗೆ ಸೇರಿವೆ” ಎಂದರು.

“ಇಂತಹ ಮೂರು ಘಟಕಗಳು ಕ್ರಮವಾಗಿ KAPS -3&4 ಮತ್ತು RAPP -7, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಯೋಜನೆಗೆ ಸಂಬಂಧಿಸಿದ ಸಾಮಗ್ರಿಗಳು ಮತ್ತು ಉಪಕರಣಗಳನ್ನು ದೇಶೀಯ ಉದ್ಯಮ ಪಾಲುದಾರರು ಪೂರೈಸಲಿದ್ದು ಮತ್ತು ಸರ್ಕಾರದ ಆತ್ಮನಿರ್ಭರ ಭಾರತ ಧೈಯಕ್ಕೆ ಅನುಗುಣವಾಗಿ ಕೆಲಸಗಳನ್ನು ಭಾರತೀಯ ಗುತ್ತಿಗೆದಾರರೇ ನಿರ್ವಹಿಸಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಕೈಗಾ ಸ್ಥಳದಲ್ಲಿ 220 ಮೆಗಾವ್ಯಾಟ್‌ನ 4 ಘಟಕಗಳು ಒಟ್ಟು 880 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. 5 ಮತ್ತು 6 ಘಟಕಗಳು ಪೂರ್ಣಗೊಂಡ ನಂತರ, ಇಲ್ಲಿ ಒಟ್ಟು ಸಾಮರ್ಥ್ಯವು 2,280 ಮೆ.ವ್ಯಾಟ್‌ಗೆ ಹೆಚ್ಚಳವಾಗಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular