ಬೆಂಗಳೂರು, ಮುಂಬೈ ಮತ್ತು ಪಂಜಾಬ್‌ನಂತಹ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಪೂರೈಕೆ ಕೊರತೆ ಉಂಟಾಗಿದೆ. ಆದರೆ ಕೃತಕವಾಗಿ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಸಹ ಇದೆ.
ಬೆಂಗಳೂರು ಹೋಟೆಲುಗಳ ಸಂಘ (ರಿ.) ಸೋಮವಾರ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿತ್ತು. ಇಂದಿನಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸರಬರಾಜು ನಿಲ್ಲಿಸಲಾಗಿದೆ. ಹೊಟೇಲು ಉದ್ಯಮ Essential Service ಅಡಿಯಲ್ಲಿ ಬುರುವುದರಿಂದ ಇದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರೀಕರು ವಿದ್ಯಾರ್ಥಿಳು, ವೈದ್ಯಕೀಯ ಹಾಗೂ ಇನ್ನಿತರ ಸೇವೆಯಲ್ಲಿರುವ ಹೆಚ್ಚಿನ ಜನರಿಗೆ ತಮ್ಮ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗಲಿದೆ ಎಂದು ಹೇಳಿತ್ತು.
ಇದರ ಜೊತೆಗೆ ಗ್ಯಾಸ್ ಸರಬರಾಜು ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ನಮ್ಮ ಹೊಟೇಲು ಉದ್ಯಮವೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ತೈಲ ಕಂಪನಿಗಳು 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ತಿಳಿಸಿದ್ದರು. ಹೀಗಿದ್ದರೂ ಏಕಾಏಕಿ ಸರಬರಾಜು ನಿಲ್ಲಿಸಿರುವುದು ಹೊಟೇಲು ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ ಎಂದು ತಿಳಿಸಿತ್ತು.
ವಿದ್ಯಾರ್ಥಿ ಭವನದ ದೋಸೆ ಇಲ್ಲ: ಸಾಮಾಜಿಕ ಜಾಲತಾಣಗಳ ಮಾಹಿತಿ ಪ್ರಕಾರ ಮಂಗಳವಾರ ವಿದ್ಯಾರ್ಥಿ ಭವನದಲ್ಲಿ ದೋಸೆ ಸಿಗುತ್ತಿಲ್ಲ. ಎಲ್‌ಪಿಜಿ ಕೊರತೆಯ ಕಾರಣ ದೋಸೆ ಮಾಡಲಾಗುತ್ತಿಲ್ಲ.
ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳಲ್ಲಿ ಒಂದಾದ ವಿದ್ಯಾರ್ಥಿ ಭವನ ಸದಾ ಗಿಜಿಗಿಡುತ್ತಿರುತ್ತದೆ. ಅದರಲ್ಲೂ ಶನಿವಾರ, ಭಾನುವಾರಗಳಂತೂ ಇಲ್ಲಿ ದೋಸೆ ಸವಿಯಲು ಇಚ್ಛಿಸುವವರ ಸಾಲು ಇರುತ್ತದೆ.
ಬೆಂಗಳೂರು ನಗರದ ಗಾಂಧಿ ಬಜಾರ್‌ನ ಪ್ರಮುಖ ಹೋಟೆಲ್ ವಿದ್ಯಾರ್ಥಿ ಭವನದಲ್ಲಿ ಮಂಗಳವಾರ ದೋಸೆ ಸಿಕ್ತಿಲ್ಲ ಎಂಬ ಮಾಹಿತಿ ಎಲ್ಲಾ ಕಡೆ ಹರಿದಾಡುತ್ತಿದೆ. ಆದರೆ ಈ ಕುರಿತು ವಿದ್ಯಾರ್ಥಿ ಭವನದ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಯಾವುದೇ ಅಪ್‌ಡೇಟ್ ನೀಡಿಲ್ಲ.
ಬೆಂಗಳೂರು ಹೋಟೆಲುಗಳ ಸಂಘ (ರಿ.) ತೈಲ ಕಂಪನಿಗಳು 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ತಿಳಿಸಿದ್ದರು. ಹೀಗಿದ್ದರೂ ಏಕಾಏಕಿ ಸರಬರಾಜು ನಿಲ್ಲಿಸಿರುವುದು ಹೊಟೇಲು ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ.
ಆದ್ದರಿಂದ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಈ ವಿಚಾರದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವಾಣಿಜ್ಯ ಗ್ಯಾಸ್ ಸರಬರಾಜನ್ನು ಪುನರಾರಂಭ ಮಾಡಿ ಹೊಟೇಲು ಉದ್ಯಮಕ್ಕೆ ಸಹಕಾರ ನೀಡುವರೆಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದೆ.

