HomeSpecialಬೇಸಿಗೆಯಲ್ಲಿ ಹಿತವೆನಿಸುವ ಪ್ಲಾಜೋ ಪ್ಯಾಂಟ್ ಗಳು

ಬೇಸಿಗೆಯಲ್ಲಿ ಹಿತವೆನಿಸುವ ಪ್ಲಾಜೋ ಪ್ಯಾಂಟ್ ಗಳು

ಬೇಸಿಗೆಯ ಝಳ ಎಲ್ಲೆಲ್ಲೂ ಹೆಚ್ಚಾಗಿದೆ. ಸುಡುವ ಬೇಸಿಗೆಯಲ್ಲಿ ಹಿತವೆನಿಸುವ ಬಟ್ಟೆಗಳನ್ನು ಧರಿಸಿದರೆ ಮಾತ್ರ ಮನಸ್ಸಿಗೂ ಆರಾಮ. ಬೇಸಿಗೆಯಲ್ಲಿ ಜನ ಹೆಚ್ಚಾಗಿ ಹತ್ತಿಯಿಂದ ತಯಾರಿಸುವ ಹಗುರವಾದ ಬಟ್ಟೆಯನ್ನು ಧರಿಸಲು ಇಷ್ಟ ಪಡುತ್ತಾರೆ.

ಪ್ಲಾಜೋ ಪ್ಯಾಂಟ್ ಗಳು ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗುತ್ತಿದೆ. ಹಾಗಂತ ಈ ಪ್ಲಾಜೋ ಪ್ಯಾಂಟ್ ಗಳು ಈಗ ಬಂದ ಹೊಸ ಟ್ರೆಂಡ್ ಅಲ್ಲ. ಈಗಾಗಲೇ 70 ರ ದಶಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಇವು ಈಗ ಮತ್ತೆ ಫ್ಯಾಷನ್ ಲೋಕಕ್ಕೆ ಎಂಟ್ರಿ ಕೊಟ್ಟಿದೆ.

ಸೊಂಟದಿಂದ ಕಾಲಿನವರೆಗೂ ಬರುವ, ಹೆಚ್ಚು ಸಡಿಲವಾದ ಈ ಪ್ಲಾಜೋ ಪ್ಯಾಂಟ್ ಗಳು ಚೆನ್ನಾಗಿ ಗಾಳಿ ಆಡುವುದರಿಂದ ಬೇಸಿಗೆಗೆ ಇದು ಹೆಚ್ಚು ಹಿತಕರ. ಪ್ಯೂರ್ ಕಾಟನ್, ನೈಲಾನ್, ಸಿಂಥೆಟಿಕ್, ಕ್ರೇಪ್ ಹೀಗೆ ಹಲವಾರು ವಿಧದ ಪ್ಯಾಂಟ್ ಗಳು ಮಾರುಕಟ್ಟೆಯಲ್ಲಿ ಲಭ್ಯ. ದಪ್ಪ ಹಾಗೂ ಸಪೂರ ಇರುವವರಿಗೂ ಒಪ್ಪುವ ಈ ಪ್ಲಾಜೊ ಪ್ಯಾಂಟ್ ಗಳು ಕುರ್ತಾ, ಟೀ ಶರ್ಟ್ ಎರಡಕ್ಕೂ ಹೊಂದಿಕೆಯಾಗುವುದು ಇದರ ಮತ್ತೊಂದು ಪ್ಲಸ್ ಪಾಯಿಂಟ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular