HomeLatest NewsVideo: ಶತಕದ ನಂತರ ಕೊಹ್ಲಿಯನ್ನು ಅಪ್ಪಿಕೊಳ್ಳಲು ಓಡೋಡಿ ಬಂದ ಗೌತಮ್ ಗಂಭೀರ್

Video: ಶತಕದ ನಂತರ ಕೊಹ್ಲಿಯನ್ನು ಅಪ್ಪಿಕೊಳ್ಳಲು ಓಡೋಡಿ ಬಂದ ಗೌತಮ್ ಗಂಭೀರ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ 3 ನೇ ದಿನದಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕದೊಂದಿಗೆ ಇತಿಹಾಸ ಬರೆದಿದ್ದಾರೆ. ಬಿಸಿಸಿಐನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ವಿಶೇಷ ವೀಡಿಯೊವನ್ನು ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಶತಕ ಬಾರಿಸಿದ ನಂತರ ಕೊಹ್ಲಿ ಡ್ರೆಸ್ಟಿಂಗ್‌ ರೂಮ್‌ ಗೆ ಹಿಂತಿರುಗಿದ್ದು, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಭಾರತದ ಆಟಗಾರರು ಎದ್ದುನಿಂತು ಭಾರಿ ಚಪ್ಪಾಳೆಯೊಂದಿಗೆ ಸ್ವಾಗತಿಸಲಾಗಿದೆ.

ಮೊದಲು ಬಂದು ಕೊಹ್ಲಿಯನ್ನು ಅಪ್ಪಿಕೊಂಡ ರಿಷಬ್ ಪಂತ್ ಹೃತ್ಪೂರ್ವಕ ಅಭಿನಂದನೆ ಹೇಳಿದರು. ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಕೊಹ್ಲಿ ಒಳಗೆ ಹೋಗುತ್ತಿದ್ದಂತೆ, ಅವರನ್ನು ತಬ್ಬಿಕೊಳ್ಳಲು ಓಡಿಬಂದ ಹೃದಯಸ್ಪರ್ಶಿ ಸನ್ನಿವೇಶದ ವಿಡಿಯೋ ವೈರಲ್‌ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular