HomeLatest NewsBREAKING : ಹೈಕಮಾಂಡ್ ಬುಲಾವ್ : ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ CM ಸಿದ್ದರಾಮಯ್ಯ, DCM...

BREAKING : ಹೈಕಮಾಂಡ್ ಬುಲಾವ್ : ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ CM ಸಿದ್ದರಾಮಯ್ಯ, DCM ಡಿಕೆ ಶಿವಕುಮಾರ್.!

ಬೆಂಗಳೂರು : ವರಿಷ್ಠರ ಬುಲಾವ್ ಬೆನ್ನಲ್ಲೇ ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.

ಬೆಂಗಳೂರು ಕಾಲ್ತುಳಿತ ದುರಂತದಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಘಟನೆ ನಡೆದ ದಿನ ಪ್ರಾಥಮಿಕ ಮಾಹಿತಿ ಪಡೆದ ವರಿಷ್ಟರು ಇದೀಗ ಸಂಪೂರ್ಣ ವರದಿ ಪಡೆಯಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದಲ್ಲಿ ಪೊಲೀಸ್ ಕಮಿಷನರ್ ಒಬ್ಬರ ಮೇಲೆ ಮಾತ್ರವೇ ಕ್ರಮ ಕೈಗೊಂಡಿಲ್ಲ, ಇನ್ನೂ 5 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಹಲವು ಹುದ್ದೆಗಳಲ್ಲಿ ಬದಲಾವಣೆ ತರಲಾಗಿದೆ. ಬಿಜೆಪಿ ನಾಯಕರಿಗೆ ಎರಡು ನಾಲಿಗೆ, ಗಳಿಗೆಗೊಂದು ಬಣ್ಣ. ಆರ್ಸಿಬಿ ವಿಜಯಯಾತ್ರೆಗೆ ಅವಕಾಶ ನೀಡದಿದ್ದಕ್ಕೆ ಸರ್ಕಾರವನ್ನು ಟೀಕಿಸಿದ ಬಿಜೆಪಿ, ಒಂದು ವೇಳೆ ವಿಧಾನಸೌಧದ ಎದುರು ಆರ್ಸಿಬಿ ಆಟಗಾರರನ್ನು ಸನ್ಮಾನಿಸದೆ ಇದ್ದಿದ್ದರೆ ಇನ್ನೊಂದು ರೀತಿ ಟೀಕೆ ಮಾಡುತ್ತಿದ್ದರು. ಅವರ ವರಸೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular