HomeLatest NewsSHOCKING : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ಲವರ್ ಜೊತೆ ‘ಸೆಕ್ಸ್’ ಮಾಡಿ...

SHOCKING : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ಲವರ್ ಜೊತೆ ‘ಸೆಕ್ಸ್’ ಮಾಡಿ 13 ಬಾರಿ ಇರಿದು ಕೊಂದ ಪಾಗಲ್ ಪ್ರೇಮಿ.!

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ ಪ್ರಕರಣ ನಡೆದಿದ್ದು, ಪ್ರಿಯತಮನೇ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಬೆಂಗಳೂರಿನ ಪೂರ್ಣಪ್ರಜ್ಞಾ ನಗರದ ಹೋಟೆಲ್ ಓಯೋ ರೂಂ ನಲ್ಲಿ ಈ ಘಟನೆ ನಡೆದಿದೆ. ಹರಿಣಿ (36) ಹತ್ಯೆಯಾದ ಮಹಿಳೆ. ಪ್ರಿಯತಮ್ ಯಶಸ್ ಹರುಣಿಯನ್ನು ಹತ್ಯೆಗೈದಿರುವ ಆರೋಪಿ.

ಮದುವೆಯಾಗಿ ಇಬ್ಬರು ಮಕ್ಕಳಿದ್ದ ಹರಿಣಿಗೆ ಜಾತ್ರೆಯಲ್ಲಿ ಯಶಸ್ ಪರಿಚಯವಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. ಬಳಿಕ ಪ್ರೀತಿ ದೈಹಿಕ ಸಂಬಂಧಕ್ಕೆ ತಿರುಗಿದೆ. ನಂತರ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮಹಿಳೆ ದೂರವಾಗಿದ್ದಳು. ಇದರಿಂದ ಹುಚ್ಚನಂತೆ ಆಗಿದ್ದ ಯಶಸ್ ಆಕೆ ಕೊಲೆ ಮಾಡಲು ಕಾಯುತ್ತಿದ್ದನು.
ಒಂದು ದಿನ ಹರಿಣಿ ಮತ್ತೆ ಯುವಕನ ಸಂಪರ್ಕಕ್ಕೆ ಬಂದಿದ್ದು, ಇಬ್ಬರು ಮಾತುಕತೆ ನಡೆಸಿ ಓಯೋ ರೂಮ್ ಗೆ ಹೋಗಿದ್ದಾರೆ. ನಂತರ ಮಹಿಳೆ ಜೊತೆ ಲೈಂಗಿಕ ಸಂಪರ್ಕ ನಡೆಸಿ, ತನಗೆ ಸಿಗದವಳು ಇನ್ಯಾರಿಗೂ ಸಿಗಬಾರದೆಂದು ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ .ಜೂನ್ 6ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಿಣಿ ನನ್ನನ್ನು ಅವೈಡ್ ಮಾಡಿದ್ದಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular