HomeEntertainmentಆಗಸ್ಟ್ 24ಕ್ಕೆ ಬಿಡುಗಡೆಯಾಗಲಿದೆ 'ಸಿಟಿಲೈಟ್ಸ್' ಸಿನಿಮಾದ 'ಒಂದೇ ಚಂದ್ರ' ಗೀತೆ

ಆಗಸ್ಟ್ 24ಕ್ಕೆ ಬಿಡುಗಡೆಯಾಗಲಿದೆ ‘ಸಿಟಿಲೈಟ್ಸ್’ ಸಿನಿಮಾದ ‘ಒಂದೇ ಚಂದ್ರ’ ಗೀತೆ

ಸ್ಯಾಂಡಲ್‌ವುಡ್ ಯುವ ನಟ ವಿನಯ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಸಿಟಿಲೈಟ್ಸ್’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮುಂಬರುವ ಸೆಪ್ಟೆಂಬರ್ 18ರಂದು ಚಿತ್ರ ತೆರೆಕಾಣಲಿದೆ. ಇದರ ಬೆನ್ನಲ್ಲೇ ಸಿನಿಮಾದ ಪ್ರಚಾರ ಕಾರ್ಯ ಚುರುಕುಗೊಳಿಸಿರುವ ಚಿತ್ರತಂಡ, ಆಗಸ್ಟ್ 24ರಂದು ‘ಒಂದೇ ಚಂದ್ರ’ ಎಂಬ ಮತ್ತೊಂದು ಮಧುರ ಗೀತೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಈಗಾಗಲೇ ಚಿತ್ರದ ಹಾಡುಗಳು ಅನಾವರಣಗೊಂಡು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದು ಸೂಪರ್ ಹಿಟ್ ಆಗಿವೆ. ಇದೀಗ ಹೊರಬರುತ್ತಿರುವ ‘ಒಂದೇ ಚಂದ್ರ’ ಗೀತೆಗೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಎಂ.ಆರ್. ಅವರ ಸಂಗೀತ ಸಂಯೋಜನೆಯಿದ್ದು, ಗಾಯಕ ಆಂಥೋನಿ ದಾಸನ್ ಧ್ವನಿಯಾಗಿದ್ದಾರೆ. ನಾಗಾರ್ಜುನ್ ಶರ್ಮ ಈ ಹಾಡಿಗೆ ಅರ್ಥಪೂರ್ಣ ಸಾಹಿತ್ಯ ಬರೆದಿದ್ದಾರೆ.

ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ಮೋನಿಷಾ ವಿಜಯ್‌ಕುಮಾರ್ ಅಭಿನಯಿಸಿದ್ದಾರೆ. ವಿಜಯಕುಮಾರ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ದುನಿಯಾ ಟಾಕೀಸ್ ಹಾಗೂ ಯಂತ್ರೋದ್ಧಾರಕ ಆಂಜನೇಯ ಬ್ಯಾನರ್ ಅಡಿಯಲ್ಲಿ ವಿಜಯಕುಮಾರ್ ಮತ್ತು ವಿಕ್ರಮ್ ಆರ್ಯ ಜಂಟಿಯಾಗಿ ನಿರ್ಮಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ಶಿವಸೇನಾ ಹಾಗೂ ಹರ್ಷ ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಮತ್ತು ವಿನೋದ್, ನರಸಿಂಹ ಸಿ, ಸಾಗರ್ ಸಾಹಸ ನಿರ್ದೇಶನ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular