HomeInternationalಚೀನಾದಲ್ಲಿ ವಿದ್ಯಾರ್ಥಿ ಚೂರಿ ಇರಿತಕ್ಕೆ 8 ಮಂದಿ ಬಲಿ, 17 ಜನರಿಗೆ ಗಾಯ

ಚೀನಾದಲ್ಲಿ ವಿದ್ಯಾರ್ಥಿ ಚೂರಿ ಇರಿತಕ್ಕೆ 8 ಮಂದಿ ಬಲಿ, 17 ಜನರಿಗೆ ಗಾಯ

ಬೀಜಿಂಗ್: 21 ವರ್ಷದ ವಿದ್ಯಾರ್ಥಿಯೊಬ್ಬ ಶನಿವಾರ ಸಂಜೆ ಪೂರ್ವ ಚೀನಾದ ವುಕ್ಸಿ ನಗರದಲ್ಲಿ ಚೂರಿ ಇರಿದು 8 ಮಂದಿ ಹತ್ಯೆ ಮಾಡಿದ್ದಾನೆ

ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ಹೇಳಿಕೆಯಲ್ಲಿ ದಾಳಿಯನ್ನು ದೃಢಪಡಿಸಿದ್ದಾರೆ. ಆದರೆ, ಸಂಭವನೀಯ ಉದ್ದೇಶವನ್ನು ಬಹಿರಂಗಪಡಿಸಿಲ್ಲ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಝುಹೈನಲ್ಲಿ ನಡೆದ ಮತ್ತೊಂದು ದುರಂತದ ಕೆಲವೇ ದಿನಗಳಲ್ಲಿ ಈ ಚೂರಿ ಇರಿತದ ಘಟನೆ ಸಂಭವಿಸಿದೆ, ಅಲ್ಲಿ ಕ್ರೀಡಾ ಕೇಂದ್ರದ ಹೊರಗೆ ಹಿಟ್ ಅಂಡ್ ರನ್ ಘಟನೆಯಲ್ಲಿ 35 ಜನರು ಸಾವನ್ನಪ್ಪಿದರು ಮತ್ತು 43 ಮಂದಿ ಗಾಯಗೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular