HomeKarnatakaಭೂತ ಬಿಡಿಸುವುದಾಗಿ ಹೇಳಿ ಯುವತಿಗೆ ಚಿತ್ರಹಿಂಸೆ: ಸತೀಶ್ ಪಾತ್ರಿ ವಿರುದ್ಧ ದೂರು ದಾಖಲು

ಭೂತ ಬಿಡಿಸುವುದಾಗಿ ಹೇಳಿ ಯುವತಿಗೆ ಚಿತ್ರಹಿಂಸೆ: ಸತೀಶ್ ಪಾತ್ರಿ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು: ದೈವಾರಾಧನೆ ಹೆಸರಿನಲ್ಲಿ ಭೂತ ಬಿಡಿಸುವ ನೆಪದಲ್ಲಿ ಸತೀಶ್ ಪಾತ್ರಿ ಎಂಬಾತ ಯುವತಿಯೊಬ್ಬಳಿಗೆ ಚಿತ್ರಹಿಂಸೆ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯವಾಗಿ ದೇವಾಲಯ ನಿರ್ಮಿಸಿಕೊಂಡಿರುವ ಸತೀಶ್ ಪಾತ್ರಿ ಎಂಬಾತ ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಯೊಬ್ಬಳಿಗೆ ಅಮಾನವೀಯವಾಗಿ ಹಿಂಸಿಸಿದ್ದಾನೆ. ಈ ಕುರಿತ ವಿಡಿಯೋ ಮತ್ತು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸತೀಶ್ ಪಾತ್ರಿ ಎಂಬಾತ ಯುವತಿಯನ್ನು ಬಲವಂತವಾಗಿ ಹಿಡಿದುಕೊಂಡು ಹೆದರಿಸುತ್ತಿರುವುದು ವಿಡಿಯೋದಲ್ಲಿದೆ. ಕೋಳಿಯನ್ನು ನೀಡಿ ಅದರ ರಕ್ತ ಕುಡಿಯುವಂತೆ ಒತ್ತಾಯಿಸುವುದು, ಒಂದು ವೇಳೆ ರಕ್ತಾಹಾರ ಸ್ವೀಕರಿಸದಿದ್ದರೆ ಬಾಯಿಯಲ್ಲಿ ಉರಿಯುವ ಕರ್ಪೂರ ಇಡುವುದಾಗಿ ಬೆದರಿಕೆ ಹಾಕುವುದು ಹಾಗೂ ಬಾಳೆ ಎಲೆಯ ಮೇಲಿಟ್ಟ ಅವಲಕ್ಕಿಯನ್ನು ಸಂಪೂರ್ಣವಾಗಿ ತಿನ್ನುವಂತೆ ಗದರಿಸುವುದು ದೃಶ್ಯದಲ್ಲಿದೆ. ಇದರೊಂದಿಗೆ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ.

ಕರಾವಳಿ ಭಾಗದ ಆಚರಣೆಗಳನ್ನು ಬಂಡವಾಳ ಮಾಡಿಕೊಂಡು ಸತೀಶ್ ಪಾತ್ರಿ ವಂಚನೆ ಎಸಗುತ್ತಿದ್ದಾನೆ ಎಂದು ಸಾರ್ವಜನಿಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಊರಿನ ಮುಖಂಡ ತಮ್ಮಣ್ಣಶೆಟ್ಟಿ, ಸತೀಶ್ ಪಾತ್ರಿ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳುವಂತೆ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಡಿಯೋಗಳು ವೈರಲ್ ಬೆನ್ನಲ್ಲೇ ಸತೀಶ್ ಪಾತ್ರಿ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದು ಮೂರು ವರ್ಷಗಳಷ್ಟು ಹಳೆಯ ವಿಡಿಯೋ. ನಾನು ಕಳೆದ ಒಂದೂವರೆ ವರ್ಷದಿಂದ ದರ್ಶನ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ದೇವಾಲಯದ ಹಳೆಯ ಧರ್ಮದರ್ಶಿಯೇ ನನ್ನ ವಿರುದ್ಧ ಪಿತೂರಿ ನಡೆಸಿ, ಈ ಹಳೆಯ ವಿಡಿಯೋಗಳನ್ನು ಇಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular