HomeKarnatakaಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟ ಹಕ್ಕಿಜ್ವರ: ಏಕಾಏಕಿ ಸಾವನ್ನಪ್ಪಿದ 36 ಕೋಳಿಗಳು!

ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟ ಹಕ್ಕಿಜ್ವರ: ಏಕಾಏಕಿ ಸಾವನ್ನಪ್ಪಿದ 36 ಕೋಳಿಗಳು!

ಚಿಕ್ಕಬಳ್ಳಾಪುರ: ರಾಯಚೂರಿನ ಮಾನ್ವಿಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಈ ಘಟನೆ ಬೆನ್ನಲ್ಲೇ ಇತ್ತ ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, 36 ಕೋಳಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಜಿಲ್ಲೆಯ ವರದಹಳ್ಳಿಯ ದ್ಯಾವಪ್ಪ ಹಾಗೂ ರತ್ನಮ್ಮ ಎಂಬುವವರ ಮನೆಯಲ್ಲಿ 36 ಕೋಳಿಗಳು ರಾತ್ರಿ ಬೆಳಗಾವುವಷ್ಟರಲ್ಲಿ ಮೃತಪಟ್ಟಿದ್ದವು. ವಿಷ ಆಹಾರ ಸೇವನೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಪಶುಸಂಗೋಪನಾ ಇಲಾಖೆ ಕೋಳಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಇದೀಗ ಲ್ಯಾಬ್ ವರದಿ ಜಿಲ್ಲಾಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಕೈ ಸೇರಿದೆ.

ಹಕ್ಕಿಜ್ವರದಿಂದಲೇ ಕೋಳಿಗಳು ಮೃತಪಟ್ಟಿವೆ ಎಂಬುದು ದೃಢವಾಗಿದೆ. ವರದಹಳ್ಳಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಾದ್ಯಂತ ಔಷಧಿ ಸಂಪಡಿಸಲಾಗಿದೆ. ಕೋಳಿ ಸಾಕಿರುವವರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular