HomeIndiaಏ. 1 ರಿಂದ ಪ್ಯಾನ್ ಕಾರ್ಡ್ ಅರ್ಜಿ ನಿಯಮ ಬದಲಾವಣೆ: ಆಧಾರ್ ಜತೆ, ಜನನ ಪ್ರಮಾಣ...

ಏ. 1 ರಿಂದ ಪ್ಯಾನ್ ಕಾರ್ಡ್ ಅರ್ಜಿ ನಿಯಮ ಬದಲಾವಣೆ: ಆಧಾರ್ ಜತೆ, ಜನನ ಪ್ರಮಾಣ ಪತ್ರ, ಅಂಕಪಟ್ಟಿ ಇತರೆ ದಾಖಲೆ ಕಡ್ಡಾಯ

ನವದೆಹಲಿ: ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ನಿಯಮ ಬದಲಾವಣೆಯಾಗಲಿದೆ. ಪ್ಯಾನ್ ಕಾರ್ಡ್ ಗೆ ಅರ್ಜಿ ಪ್ರಕ್ರಿಯೆ ಮತ್ತು ಹಣಕಾಸು ವಹಿವಾಟಿಗೆ ಸಂಬಂಧಿಸಿದ ನಿಯಮಗಳಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆದಾಯ ತೆರಿಗೆ ಇಲಾಖೆಯು ಮಹತ್ವದ ಬದಲಾವಣೆಗಳನ್ನು ಘೋಷಣೆ ಮಾಡಿದೆ.

ಇದುವರೆಗೆ ಆಧಾರ್ ಕಾರ್ಡ್ ಮೂಲಕ ಮಾತ್ರ ಪ್ಯಾನ್ ಕಾರ್ಡ್ ಪಡೆಯಲು ಅವಕಾಶ ಇತ್ತು. ಏಪ್ರಿಲ್ 1ರಿಂದ ಆಧಾರ್ ಕಾರ್ಡ್ ಜೊತೆಗೆ ಜನನ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, 10ನೇ ತರಗತಿ ಅಂಕಪಟ್ಟಿ, ಪಾಸ್ಪೋರ್ಟ್ ನಂತಹ ಹೆಚ್ಚುವರಿ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ,

ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸುವವರು ಆಧಾರ್ ಮೂಲಕ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ 1ರಿಂದ ಆಧಾರ್ ಜೊತೆಗೆ ಜನನ ಪ್ರಮಾಣ ಪತ್ರ, ವೋಟರ್ ಐಡಿ, 10ನೇ ತರಗತಿಯ ಅಂಕಪಟ್ಟಿಯಂತಹ ಹೆಚ್ಚುವರಿ ದಾಖಲೆ ಕಡ್ಡಾಯವಾಗಿ ಸಲ್ಲಿಸಬೇಕಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular