HomeKarnatakaಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅರಿವು ನವೀಕರಣ ಯೋಜನೆಯಡಿ ಸಾಲ ಸೌಲಭ್ಯ

ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅರಿವು ನವೀಕರಣ ಯೋಜನೆಯಡಿ ಸಾಲ ಸೌಲಭ್ಯ

ಪ್ರಸಕ್ತ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧೀಕಾರದಿಂದ ಆಯ್ಕೆಯಾಗುವ ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಅರಿವು ನವೀಕರಣ ಸಾಲ ಯೋಜನೆಯಡಿಯಲ್ಲಿ ವಿಧ್ಯಾಭ್ಯಾಸ ಸಾಲಕ್ಕಾಗಿ ಆನ್-ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ.

ಎಂಬಿಬಿಎಸ್, ಬಿಡಿಎಸ್, ಬಿಇ, ಬಿಆರ್ಕ್, ಬಿಟೆಕ್, ಮತ್ತು ಬಿಎಸ್‍ಸಿ ಅಗ್ರಿ, ಫಿಶಿರಿ, ವೆಟರ್ನರಿ, ಎಂಬಿಎ, ಎಂಸಿಎ, ಎಲ್.ಎಲ್.ಬಿ., ಬಿ.ಫಾರ್ಮಾ, ಎಂ.ಫಾರ್ಮಾ, ಫಾರ್ಮಾಡಿ ಇಂತಹ ಕೋರ್ಸ್‍ ಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು ನವೀಕರಣ ಸಾಲ ಯೀಜನೆಯಡಿಯಲ್ಲಿ ವಿಧ್ಯಾಭ್ಯಾಸ ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ(ಕ್ರಿಶ್ಚಿಯನ್ ಹೊರತು ಪಡಿಸಿ) ನಿಗಮದ ವೆಬ್-ಸೈಟ್ kmdconline.karnataka.gov.in ನಲ್ಲಿ ಸೆಪ್ಟೆಂಬರ್ 30 ರವರೆಗೆ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಗಳನ್ನು ಹಾಗೂ Indemnity Bond  ಅನ್ನು ಸಂಬಂಧಪಟ್ಟ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ-577002. ದೂ.ಸಂ: 8277944215 ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.(ಚಿತ್ರ ಕೃಪೆ:ಎಐ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಸೈನಿಕರಿಗೆ ಇಸ್ರೋದಲ್ಲಿ ಉದ್ಯೋಗ

ದಾವಣಗೆರೆ: ಇಸ್ರೋವಿನ ಲಿಕ್ವಿಡ್ ಫೋರಪುಲ್ಷನ್ ಸಿಸ್ಟಂ ಸೆಂಟರ್, ಬೆಂಗಳೂರು ಹಾಗೂ ತಿರುವನಂತಪುರಂನಲ್ಲಿ ತಲಾ ಒಂದು ತಾಂತ್ರಿಕ ಬಿ ಹುದ್ದೆಗೆ ಎಸ್.ಎಸ್.ಎಲ್.ಸಿ ಮತ್ತು ಐ.ಟಿ.ಐ ಅಥವಾ ಎನ್.ಟಿ.ಸಿ ಅಥವಾ ಎನ್.ಎ.ಸಿ ಯಲ್ಲಿ ಉತ್ತೀರ್ಣ ಹೊಂದಿರುವ ಮಾಜಿ ಸೈನಿಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  ಆಸಕ್ತ ಮಾಜಿ ಸೈನಿಕರು ಸೆಪ್ಟೆಂಬರ್ 10 ರೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಯಲ್ಲಿ ಖುದ್ದಾಗಿ ಭೇಟಿ ನೀಡಿ ಅಥವಾ ದೂ.ಸಂ: 08182-220925 ಗೆ ಕರೆ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0471-2567729/2567781 (ಇಸ್ರೋ) 08182-220925 ಗೆ ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾS ಉಪ ನಿರ್ದೇಶಕರು  ತಿಳಿಸಿದ್ದಾರೆ.

ಮಹಿಳೆ ಕಾಣೆ: ಪತ್ತೆಗಾಗಿ ಮನವಿ

ದಾವಣಗೆರೆ: ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಸುರಹೊನ್ನೆ ಗ್ರಾಮದ ಚೈತ್ರಾ ಕೋಂ ವಿಜಯ ವಯಸ್ಸು ಸುಮಾರು 30 ವರ್ಷ, ಇವರು ದಿನಾಂಕ:30-7-2026 ರಂದು ಮನೆಯಿಂದ ಹೋದವರೂ ಇದೂವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ

ವ್ಯಕ್ತಿಯ ಚಹರೆ: 5 ಅಡ ಎತ್ತರ, ಗೋಧಿ ಮೈಬಣ್ಣ, ಸಾಧರಣ ಮೈಕಟ್ಟು, ಎಡಗೈಯಲ್ಲಿ ಶಿವು ಮತ್ತು ವಿಜಯ ಮತ್ತು ಪಿ ಹಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಚೂಡಿದರ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಬೇಕೆಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರದ ಯಂಗ್ ಇಂಡಿಯಾ ಫಿಜಿಕಲ್ ಎಜುಕೇಶನ್ ಅಂಡ್ ಸ್ಪೋರ್ಟ್ಸ್ ಯೂನಿವರ್ಸಿಟಿ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: 2036ರ ಒಲಂಪಿಕ್ಸ್ ಗಾಗಿ ತೆಲಂಗಾಣ ಸರ್ಕಾರದ ಯಂಗ್ ಇಂಡಿಯಾ ಫಿಜಿಕಲ್ ಎಜುಕೇಶನ್ ಅಂಡ್ ಸ್ಪೋರ್ಟ್ಸ್ ಯೂನಿವರ್ಸಿಟಿ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತದಲ್ಲೇ ಮೊದಲ ಬಾರಿಗೆ 11 ತಿಂಗಳ ವಸತಿ ಸಹಿತ ಯಂಗ್ ಇಂಡಿಯಾ ಸ್ಪೋರ್ಟ್ಸ್ ಫೆಲೋಶಿಪ್ ಕಾರ್ಯಕ್ರಮವನ್ನು ಅಕ್ಟೋಬರ್ 2026 ರಿಂದ ಪ್ರಾರಂಭಿಸುತ್ತಿದ್ದು, 21 ರಿಂದ 28 ವರ್ಷದ ವಯೋಮಾನದವರು ಪದವೀಧರರು ಹಾಗೂ ಕ್ರೀಡಾ ಹಿನ್ನೆಲೆಯುಳ್ಳ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದರಲ್ಲಿ 20 ಸೀಟುಗಳಿಗೆ ಸ್ಕಾಲರ್ ಶಿಪ್ ಸೌಲಭ್ಯವಿರುತ್ತದೆ.

ಯೂನಿವರ್ಸಿಟಿ ವೆಬ್‍ಸೈಟ್- https://yipesu.telangana.gov.in, ಯುನಿವರ್ಸಿಟಿ ಇಮೇಲ್-officefvicechancelloryipies@[email protected] ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ದಾವಣಗೆರೆ: 60+40ಎಂ.ಎಲ್.ಡಿ ಬಾತಿ ನೀರು ಶುದ್ದೀಕರಣ ಘಟಕದಲ್ಲಿ ಮತ್ತು ಶುದ್ದೀಕರಿಸಿದ ನೀರಿನ ಪೈಪ್‍ಲೈನ್ ದುರಸ್ಥಿ ಕಾರ್ಯದ ಪ್ರಯುಕ್ತ ಸೆಪ್ಟೆಂಬರ್ 9 ಮತ್ತು 10 ರಂದು ದಾವಣಗೆರೆ ನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಎಂದು ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular