HomeLatest Newsಕಾವೇರಿ ವಿವಾದ: ಕುಡಿಯುವ ನೀರು ರಕ್ಷಿಸುವುದು ನಮ್ಮ ಮೊದಲ ಆದ್ಯತೆ: ಬಸವರಾಜ ಬೊಮ್ಮಾಯಿ

ಕಾವೇರಿ ವಿವಾದ: ಕುಡಿಯುವ ನೀರು ರಕ್ಷಿಸುವುದು ನಮ್ಮ ಮೊದಲ ಆದ್ಯತೆ: ಬಸವರಾಜ ಬೊಮ್ಮಾಯಿ

​ನವದೆಹಲಿ:”ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವ ಉಂಟಾದಾಗಲೆಲ್ಲಾ ನೀರಿಗಾಗಿ ವಿವಾದ ಏಳುವುದು ಸಾಮಾನ್ಯ. ತಮಿಳುನಾಡಿಗೆ ಕುಡಿಯುವ ನೀರಿನ ಹಕ್ಕಿಗಿಂತ ನಮಗೆ ಕಾವೇರಿ ನೀರನ್ನು ನಮ್ಮ ಜನರ ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಆಗಸ್ಟ್ 2 ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ನಾವು ದೃಢವಾದ ನಿಲುವು ತಳೆಯಲಿದ್ದೇವೆ. ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

​ನವದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ​ ದೇಶದಲ್ಲಿ ಎರಡು ರೀತಿಯ ಮುಂಗಾರುಗಳಿವೆ. ಕರ್ನಾಟಕವು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈಋತ್ಯ ಮುಂಗಾರಿನಿಂದ ಮಳೆ ಪಡೆಯುತ್ತದೆ. ಆದರೆ, ಸೆಪ್ಟೆಂಬರ್ ನಂತರ ತಮಿಳುನಾಡು ಈಶಾನ್ಯ ಮುಂಗಾರಿನಿಂದ ಮಳೆ ಪಡೆಯುತ್ತದೆ. ಒಮ್ಮೆ ನೀರು ತಮಿಳುನಾಡಿಗೆ ಹರಿದು ಹೋದರೆ, ಅದನ್ನು ಮತ್ತೆ ಕರ್ನಾಟಕ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕುಡಿಯುವ ನೀರಿಗೆ ಆದ್ಯತೆ

ತಮಿಳುನಾಡು ತನ್ನ ಕೃಷಿ ಹಾಗೂ ನೀರಾವರಿ ಉದ್ದೇಶಕ್ಕಾಗಿ ನೀರು ಕೇಳುತ್ತಿದ್ದರೆ, ಕರ್ನಾಟಕವು ತನ್ನ ಜನರ ಮೂಲಭೂತ ಕುಡಿಯುವ ನೀರಿನ ಅಗತ್ಯಕ್ಕಾಗಿ ಹೋರಾಡುತ್ತಿದೆ. ಕಾವೇರಿ ನ್ಯಾಯಾಧಿಕಾರದ ಆದೇಶದಂತೆ ರಚನೆಯಾಗಿರುವ ಪ್ರಾಧಿಕಾರಗಳು ಮತ್ತು ಸಮಿತಿಗಳು ಕರ್ನಾಟಕದಲ್ಲಿ ಉಂಟಾಗಿರುವ ನೀರಿನ ಅಭಾವ ಹಾಗೂ ಕೊರತೆಯನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

​ಸರ್ವಪಕ್ಷ ಸಭೆಯಲ್ಲಿ ತಂತ್ರ:

ಸರ್ವಪಕ್ಷ ಸಭೆಯಲ್ಲಿ ತಂತ್ರ

ಆಗಸ್ಟ್ 2 ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ನಾವು ದೃಢವಾದ ನಿಲುವು ತಳೆಯಲಿದ್ದೇವೆ. ರಾಜ್ಯದಲ್ಲಿ ಮಳೆ ಹೆಚ್ಚಾಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುವವರೆಗೆ ಕಾಯಬೇಕು. ಅಲ್ಲಿಯವರೆಗೆ ನಮ್ಮ ಕುಡಿಯುವ ನೀರನ್ನು ರಕ್ಷಿಸಿಕೊಳ್ಳುವುದು ಮತ್ತು ಅಗತ್ಯಬಿದ್ದರೆ ಕಾನೂನು ಹೋರಾಟವನ್ನು ಮುಂದುವರಿಸುವುದು ನಮ್ಮ ಮುಖ್ಯ ತಂತ್ರವಾಗಿದೆ” ಎಂದು ಬೊಮ್ಮಾಯಿ ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular