alex Certify India | Kannada Dunia | Kannada News | Karnataka News | India News - Part 654
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

ನವದೆಹಲಿ: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ ಮಾಡಲಾದ ಘಟನೆ ನಡೆದಿದೆ. ದೆಹಲಿಯಿಂದ 350 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಅಮೆರಿಕಾಗೆ Read more…

ಇಂದಿರಾಗಾಂಧಿಯವರಿಗೆ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ ರಾಹುಲ್…!

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಹುಲ್ ಗಾಂಧಿ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ. ಸ್ವತಃ ರಾಹುಲ್ ಗಾಂಧಿಯವರೇ ಪತ್ರಿಕೆಯೊಂದರ ಸಂದರ್ಶನದ ವೇಳೆ ಈ ವಿಷಯ ತಿಳಿಸಿದ್ದಾರೆ. ಇಟಲಿ ಮೂಲದ ಪತ್ರಿಕೆಗೆ ಸಂದರ್ಶನ Read more…

ಅದಾನಿ ಸಮೂಹದ ವಿರುದ್ಧ ಈಗ ಮತ್ತೊಂದು ಆರೋಪ; ವೈಭವೀಕರಿಸಿದ ಬರಹ ಪ್ರಕಟಿಸಲಾಗಿದೆ ಎಂದ ‘ವಿಕಿಪೀಡಿಯ’

ಅದಾನಿ ಸಮೂಹದ ಕುರಿತು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ‘ಹಿಂಡನ್ ಬರ್ಗ್’ ವರದಿ ಬಹಿರಂಗೊಂಡ ಬಳಿಕ ಕಂಪನಿಯ ಷೇರುಗಳ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಗೌತಮ್ ಅದಾನಿಯವರ ಸಂಪತ್ತಿನಲ್ಲೂ Read more…

ರಿಕ್ಷಾ ಚಾಲಕನನ್ನು ಕಿಲೋಮೀಟರ್‌ಗಟ್ಟಲೆ ದೂರ ಎಳೆದೊಯ್ದ SUV; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ….!

ಮತ್ತೊಂದು ಹಿಟ್‌ & ಡ್ರ್ಯಾಗ್‌ ಪ್ರಕರಣ ಲಖ್ನೋದಲ್ಲಿ ಬೆಳಕಿಗೆ ಬಂದಿದೆ. ರಿಕ್ಷಾ ಚಾಲಕನಿಗೆ ಎಸ್‌ಯುವಿ ಡಿಕ್ಕಿ ಹೊಡೆದಿದ್ದು, ಹಲವಾರು ಕಿಲೋಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ. ಈ ಭೀಕರ ಅಪಘಾತದಲ್ಲಿ ರಿಕ್ಷಾ Read more…

ನೋಡಿ ಬನ್ನಿ ತಮಿಳುನಾಡಿನ ʼಚಿದಂಬರಂʼ ದೇವಾಲಯ

ಚಿದಂಬರಂ ದೇವಾಲಯವು ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ನಗರದ ಹೃದಯ ಭಾಗದಲ್ಲಿದೆ. ಈ ನಗರ ತಮಿಳುನಾಡಿನ ಕಡಲೂರು ಎಂಬ ಜಿಲ್ಲೆಗೆ ಸೇರಿದೆ. ವಿಶ್ವಕರ್ಮರ ಪರಂಪರೆಯ Read more…

ಭಾರತೀಯ ಯುವಕರಿಗೆ ಗುಡ್ ನ್ಯೂಸ್: ಬ್ರಿಟನ್ ಸರ್ಕಾರದಿಂದ ಹೊಸ ವೀಸಾ ಯೋಜನೆ

ನವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿಯಲ್ಲಿ ಮಾರ್ಚ್ 1 ರಿಂದ ಫೇಸ್ ರೇಕಗ್ನಿಷನ್ ವ್ಯವಸ್ಥೆ ಜಾರಿ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 1 ರಿಂದ ಫೇಶಿಯಲ್ ರೇಕಗ್ನಿಷನ್ ವ್ಯವಸ್ಥೆ ಜಾರಿಗೆ ತರಲು ಟಿಟಿಡಿ ಕ್ರಮಕೈಗೊಂಡಿದೆ. ತಿರುಪತಿ ತಿಮ್ಮಪ್ಪನ Read more…

ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಚಿಕ್ಕಪ್ಪನನ್ನು ಹತ್ಯೆಗೈದ ಯುವಕ

ತನ್ನ ಸಹೋದರ ತೀರಿಕೊಂಡ ಬಳಿಕ ಆತನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಲು ಬಯಸಿದ್ದ ವ್ಯಕ್ತಿಯನ್ನು 19 ವರ್ಷದ ಯುವಕ ಕೊಲೆ ಮಾಡಿದ್ದಾನೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ Read more…

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ; ನೆರೆಮನೆಯವರ ಅನುಮಾನದ ಮೇರೆಗೆ ಬಯಲಾಯ್ತು ಶಾಕಿಂಗ್ ಕೃತ್ಯ

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಕಾರದೊಂದಿಗೆ ಪತಿಯನ್ನು ಹತ್ಯೆ ಮಾಡಿದ್ದು, ನೆರೆಮನೆಯವರು ಅನುಮಾನ ವ್ಯಕ್ತಪಡಿಸಿದ ಬಳಿಕ ಘೋರ ಕೃತ್ಯ ಬಹಿರಂಗವಾಗಿದೆ. ಇಂತಹದೊಂದು ಘಟನೆ ಅಸ್ಸಾಂನ ಉದಲಗರಿ Read more…

ರೈತರ ಸಭೆಯಲ್ಲಿ ಇಂಗ್ಲಿಷ್ ಉಪಯೋಗಿಸಿದ್ದಕ್ಕೆ ಬಿಹಾರ ಸಿಎಂ ಗರಂ; ನೀವೇನು ಇಂಗ್ಲೆಂಡ್ ನಲ್ಲಿದ್ದೀರಾ ಎಂದು ಅಧಿಕಾರಿಗಳಿಗೆ ವಾರ್ನಿಂಗ್

ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕಿಸಾನ್ ಸಮಾಗಮ’ ಸಭೆಯಲ್ಲಿ ಮಾತನಾಡುವ ವೇಳೆ ಅಧಿಕಾರಿಗಳು ಬಹುತೇಕ ಇಂಗ್ಲಿಷ್ ಉಪಯೋಗಿಸಿದ್ದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗರಂ ಆಗಿದ್ದಾರೆ. ನೀವೇನು ಇಂಗ್ಲೆಂಡ್ ನಲ್ಲಿ ಇದ್ದೀರಾ Read more…

ಘೋರ ಕೃತ್ಯವೆಸಗಿದ 4 ತಿಂಗಳೊಳಗೆ ಅತ್ಯಾಚಾರ-ಕೊಲೆ ಅಪರಾಧಿಗೆ ಮರಣದಂಡನೆ

ಭೋಪಾಲ್: ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ಯುವಕನಿಗೆ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಮಂಗಳವಾರ ತೀರ್ಪು ಪ್ರಕಟಿಸುವಾಗ Read more…

ಮುಂದಿನ ತಿಂಗಳು ತೇಜಸ್ವಿ ಯಾದವ್ ಬಿಹಾರ ಸಿಎಂ…?

ಮಹಾಘಟಂಧನ್ ನಡುವೆ ನಡೆಯುತ್ತಿರುವ ಬಿರುಕುಗಳ ಮಧ್ಯೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ ನಾಯಕ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಂದಿನ ತಿಂಗಳು ಬಿಹಾರದ Read more…

ಕಟ್ಟಡದಿಂದ ಹಾರಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಆತ್ಮಹತ್ಯೆ

ಮುಂಬೈ: ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ವಿಮಲೇಶ್ ಆದಿತ್ಯ ಮುಂಬೈನಲ್ಲಿ ಮಂಗಳವಾರ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಲಕ್ ನಗರ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, Read more…

ಉದ್ಯೋಗಿಯನ್ನು ಹೊಗಳಲು ಹೋಗಿ ಪೇಚಿಗೆ ಸಿಲುಕಿದ ಸಿಇಒ; ಫೋಟೋ ನೋಡಿ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಬಾಂಬೆ ಶೇವಿಂಗ್ ಕಂಪನಿ ಸಿಇಒ ಶಂತನು ದೇಶಪಾಂಡೆ ನಿಮಗೆ ಗೊತ್ತಿರಬೇಕಲ್ವಾ ? ಅದೇ, ಈ ಹಿಂದೆ ಯುವಕರು 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ Read more…

Viral Video: ಭಾರತದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೀನಾ ಯುವತಿ; ಇಲ್ಲಿದೆ ಅವರ ಲವ್‌ ಸ್ಟೋರಿ

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಎಂಬಿಎ ಓದುತ್ತಿರುವಾಗ ಭಾರತೀಯ ಹುಡುಗನೊಬ್ಬ ಚೀನಾದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಮದುವೆಯಾಗಿದ್ದಾರೆ. ಅವರು ಆಗಾಗ್ಗೆ Read more…

ಆಕ್ಷನ್‌ – ಕಟ್‌ ಹೇಳಲು ಚಪ್ಪಲಿ ಬಳಕೆ; ಮೊಬೈಲ್‌ ಕ್ಯಾಮರಾದಲ್ಲಿ ಶೂಟ್:‌ ತಮಾಷೆ ವಿಡಿಯೋ ವೈರಲ್

ದೃಶ್ಯವನ್ನು ಚಿತ್ರಿಸಲು ದುಬಾರಿ ಉಪಕರಣಗಳು ಬೇಕು ಎಂದು ಯಾರು ಹೇಳಿದರು ? ಇದೀಗ, ಹುಡುಗರ ಗುಂಪೊಂದು ಚಪ್ಪಲಿ ಮತ್ತು ಫೋನ್ ಕ್ಯಾಮೆರಾ ಬಳಸಿ ನಾಟಕೀಯ ದೃಶ್ಯವನ್ನು ಚಿತ್ರೀಕರಿಸುವ ವೀಡಿಯೊ Read more…

ಎಲ್ಲಿಯೂ ಕಾಣದ ದೊಡ್ಡ ದೊಡ್ಡ ರುಚಿಕಟ್ಟಾದ ಸಮೋಸಾ ಕೇವಲ 25 ರೂಪಾಯಿಗೆ

ಮುಜಾಫರ್‌ನಗರ: ಸಮೋಸಾ ಎಂದರೆ ದೇಸಿಗಳು ಹೆಚ್ಚು ಇಷ್ಟಪಡುವ ಭಾರತೀಯ ತಿಂಡಿ! ತಮ್ಮ ಗ್ರಾಹಕರಿಗೆ ‘ಗರಂ ಗರಂ’ ಸಮೋಸವನ್ನು ನೀಡುವ ಹಲವಾರು ಅಂಗಡಿಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಕಾಣಬಹುದು. ಆದರೆ, Read more…

ಭಾರತೀಯ ಯುವಕನೊಂದಿಗೆ ಪಾಕ್​ ಯುವತಿ ನಿಶ್ಚಿತಾರ್ಥ: ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ನೆಟ್ಟಿಗರ ಹಾರೈಕೆ

ಪಾಕಿಸ್ತಾನಿ ಯುವತಿಯೊಬ್ಬಳು ಇತ್ತೀಚೆಗೆ ಭಾರತೀಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಂಪತಿಗಳು ಸಮಾರಂಭದಲ್ಲಿ ಕೇಕ್ ಕಟ್ ಮಾಡಿದ್ದು ಇದೀಗ ವೈರಲ್​ ಆಗಿದೆ. ಈ ಕೇಕ್​ನಲ್ಲಿ ಉಭಯ ದೇಶಗಳ ನಡುವೆ ಪ್ರೀತಿ Read more…

ಶಿವರಾತ್ರಿಯಂದು ಸದ್ಗುರು ಅದ್ಬುತ ನೃತ್ಯ: ಭಕ್ತರಿಂದ ಚಪ್ಪಾಳೆಯ ಸುರಿಮಳೆ

ಕೊಯಮತ್ತೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಕೊಯಮತ್ತೂರಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಯೋಗ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಕೊಯಮತ್ತೂರು Read more…

ಇಲ್ಲಿ ಎಲ್ಲರನ್ನೂ ಸಂಬೋಧಿಸುವುದು ಹಾಡಿನ ಮೂಲಕ; ಈ ರಾಜ್ಯದಲ್ಲಿದೆ ಹೆಸರನ್ನೇ ಕರೆಯದ ವಿಶಿಷ್ಟ ಗ್ರಾಮ

ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್‌ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ Read more…

ವಿಶ್ವದ 2ನೇ ಅತ್ಯಂತ ದುಬಾರಿ ಮನೆ ʼಆಂಟಿಲಿಯಾʼ: ಸ್ವರ್ಗಕ್ಕೇ ಕಿಚ್ಚು ಹಚ್ಚುವಂತಿದೆ ಮುಕೇಶ್‌ ಅಂಬಾನಿ ಅವರ ಐಷಾರಾಮಿ ಬಂಗಲೆ

ಉದ್ಯಮಿ ಮುಖೇಶ್‌ ಅಂಬಾನಿ ವಿಶ್ವದ ಅತ್ಯಂತ ಸಿರಿವಂತರಲ್ಲೊಬ್ಬರು. ಅಂದ್ಮೇಲೆ ಸಹಜವಾಗಿಯೇ ಅಂಬಾನಿ ಅವರ ಮನೆ ಕೂಡ ಐಷಾರಾಮಿಯಾಗಿದೆ. ಆದರೆ ಈ ಮನೆಯ ವೈಭೋಗ ನಿಜಕ್ಕೂ ಜನಸಾಮಾನ್ಯರನ್ನು ದಂಗಾಗಿಸುವಂತಿದೆ. ಮುಖೇಶ್ ಅಂಬಾನಿ Read more…

Watch Video: ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತು ರೀಲ್ಸ್; ಯುವಕನಿಗೆ ಬರೋಬ್ಬರಿ 70 ಸಾವಿರ ರೂ. ದಂಡ

ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್, ಲೈಕ್ಸ್ ಗಿಟ್ಟಿಸಿಕೊಳ್ಳಲು ಯುವಕ – ಯುವತಿಯರು ರೀಲ್ಸ್ ಮಾಡಿ ಹಂಚಿಕೊಳ್ಳಲು ಮುಂದಾಗುತ್ತಾರೆ. ಇದಕ್ಕಾಗಿ ಕೆಲವರು ತಮ್ಮ ಪ್ರಾಣವನ್ನು ಪಣಕ್ಕೊಡ್ಡುವುದರ ಜೊತೆಗೆ ಇತರೆಯವರಿಗೂ ಕಂಟಕ ಪ್ರಾಯರಾಗಿ Read more…

BIG NEWS: ಒಂದೇ ದಿನದಲ್ಲಿ 120 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 120 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,761 ಜನರು ಕೋವಿಡ್ Read more…

ಬೀದಿ ನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಆತಂಕಕಾರಿಯಾಗಿದೆ. ಇತ್ತೀಚೆಗಷ್ಟೇ ಗುಜರಾತಿನ ಸೂರತ್ ನಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹಿಂದೆಯೇ Read more…

ಒಬ್ಬಳಿಗಾಗಿ ಇಬ್ಬರ ಫೈಟ್: ‘ಅವಳೇ ನನ್ನ ಹೆಂಡ್ತಿ’ ಎಂದು ಇಬ್ಬರಿಂದಲೂ ಪ್ರತಿಪಾದನೆ; ವಿಲಕ್ಷಣ ವಾದಕ್ಕೆ ದಂಗಾದ ಪೊಲೀಸರು…!

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಈ ಪ್ರಕರಣದಲ್ಲಿ ಓರ್ವ ಮಹಿಳೆಯನ್ನು ಇಬ್ಬರು ವ್ಯಕ್ತಿಗಳು ನನ್ನ ಪತ್ನಿ ಎಂದು ಪ್ರತಿಪಾದಿಸುತ್ತಿದ್ದು ಇದನ್ನು Read more…

Shocking Video: ಹಾಡಹಗಲೇ ಮಹಿಳೆ ಮೇಲೆ ದುಷ್ಕರ್ಮಿಗಳ ದಾಳಿ; ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಎಸ್ಕೇಪ್

ಆಘಾತಕಾರಿ ಘಟನೆಯೊಂದರಲ್ಲಿ ಹಾಡಹಗಲೇ 50 ವರ್ಷದ ಮಹಿಳೆ ಮೇಲೆ ಬೈಕಿನಲ್ಲಿ ಬಂದ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಶಾಕಿಂಗ್ ಸಂಗತಿ ಎಂದರೆ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು Read more…

ಹೆಣ್ಣುಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ: ಠಾಕೂರ್ ಸಮುದಾಯ ನಿರ್ಧಾರ

ಪಾಲನ್‌ಪುರ: ಇಲ್ಲಿನ ಠಾಕೋರ್ ಸಮುದಾಯವು ಸಮಾಜದ ಹದಿಹರೆಯದ ಹುಡುಗಿಯರು ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಿದೆ. ಸಮುದಾಯ, ಸಮುದಾಯ ಸಂಪ್ರದಾಯಗಳಲ್ಲಿ ಸುಧಾರಣೆಗಳನ್ನು ತರಲು ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಿದ್ದು, ಹುಡುಗಿಯರು ಮೊಬೈಲ್ Read more…

ಅಲ್ಪಸಂಖ್ಯಾತರನ್ನು ಸೆಳೆಯಲು ಬಿಜೆಪಿ ಪ್ಲಾನ್; ಮಾರ್ಚ್ 10 ರಿಂದ ಅಲ್ಪಸಂಖ್ಯಾತ ಮೋರ್ಚಾದಿಂದ ಸರಣಿ ಸಭೆ

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಾರ್ಚ್ 10 ರಿಂದ ದೇಶದ ವಿವಿಧ ಭಾಗಗಳಲ್ಲಿ ಸರಣಿ ಸಭೆ Read more…

ಸಿಕ್ಕಿ ಬೀಳುವ ಭಯದಿಂದ ಮೊಬೈಲ್ ನುಂಗಿದ ಭೂಪ….!

ಜೈಲಿನಲ್ಲಿರುವ ಕೈದಿಗಳು ಅಲ್ಲಿಂದಲೇ ತಮ್ಮ ಕುಕೃತ್ಯಗಳನ್ನು ಮುಂದುವರಿಸಬಹುದು ಎಂಬ ಕಾರಣಕ್ಕೆ ಪೊಲೀಸರು ಆಗಾಗ ದಾಳಿ ನಡೆಸಿ ತಪಾಸಣೆ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮೊಬೈಲ್, ಮಾದಕ ದ್ರವ್ಯ ಮೊದಲಾದವುಗಳು ಸಿಗುತ್ತಲೇ Read more…

ಕುಗ್ರಾಮದಲ್ಲಿ ವಾಸಿಸುತ್ತಿರುವ ಅಂಗವಿಕಲನಿಗೆ ಡ್ರೋನ್ ಮೂಲಕ ಪಿಂಚಣಿ ವಿತರಣೆ….!

ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಅಥವಾ ಕಾಡಂಚಿನ ಕುಗ್ರಾಮಗಳಲ್ಲಿ ವಾಸಿಸುವ ಜನತೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಸಮೀಪದ ನಗರ, ಪಟ್ಟಣಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಲಭ್ಯವಾಗದ ಕಾರಣ ನಡೆದುಕೊಂಡೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...