HomeLifestyleಹೃದಯದ ‘ಸ್ಟ್ರೆಸ್ ಟೆಸ್ಟ್’ ವರದಿ ನಾರ್ಮಲ್ ಬಂದಿದ್ದರೂ ನಿರ್ಲಕ್ಷ್ಯ ಬೇಡ: ಹೃದ್ರೋಗ ತಜ್ಞರು ನೀಡಿದ ಎಚ್ಚರಿಕೆ...

ಹೃದಯದ ‘ಸ್ಟ್ರೆಸ್ ಟೆಸ್ಟ್’ ವರದಿ ನಾರ್ಮಲ್ ಬಂದಿದ್ದರೂ ನಿರ್ಲಕ್ಷ್ಯ ಬೇಡ: ಹೃದ್ರೋಗ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ

ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಬೇಧವಿಲ್ಲದೆ ಜನರನ್ನು ಕಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಹೃದಯದ ರಕ್ತನಾಳಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳು ಶೇಖರಣಗೊಂಡು ರಕ್ತ ಪರಿಚಲನೆಗೆ ಅಡ್ಡಿ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಸಾಮಾನ್ಯವಾಗಿ ಹೃದಯದ ಆರೋಗ್ಯವನ್ನು ಮತ್ತು ರಕ್ತ ಪರಿಚಲನೆಯನ್ನು ಪರೀಕ್ಷಿಸಲು ವೈದ್ಯರು ‘ಸ್ಟ್ರೆಸ್ ಟೆಸ್ಟ್’ (Stress Test) ಮಾಡಿಸಲು ಸಲಹೆ ನೀಡುತ್ತಾರೆ. ಆದರೆ ಈ ಪರೀಕ್ಷೆಯ ವರದಿ ನಾರ್ಮಲ್ ಬಂದ ತಕ್ಷಣವೇ ಹೃದಯ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ರಕ್ತನಾಳಗಳು ಸ್ವಚ್ಛವಾಗಿವೆ ಎಂದು ಅರ್ಥವಲ್ಲ ಎನ್ನುತ್ತಾರೆ ವೈದ್ಯರು.

ಅಮೆರಿಕದ ಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಡಿಮಿಟ್ರಿ ಯಾರಾನೋವ್ ಅವರ ಪ್ರಕಾರ, ಸ್ಟ್ರೆಸ್ ಟೆಸ್ಟ್ ಕೇವಲ ಹೃದಯಕ್ಕೆ ರಕ್ತ ಹೇಗೆ ಹರಿಯುತ್ತಿದೆ ಎಂಬುದನ್ನು ತೋರಿಸುತ್ತದೆಯೇ ಹೊರತು, ರಕ್ತನಾಳಗಳ ಒಳಗಿನ ನಿಖರವಾದ ಸ್ಥಿತಿಯನ್ನಲ್ಲ. ರಕ್ತನಾಳಗಳಲ್ಲಿ ಶೇಖರಣೆಯಾಗುವ ಮೃದುವಾದ ಕೊಬ್ಬು (Soft Plaque) ಅಥವಾ ರಕ್ತದ ಹರಿವಿಗೆ ಸಂಪೂರ್ಣವಾಗಿ ಅಡ್ಡಿಪಡಿಸದ ಸಣ್ಣ ಪ್ರಮಾಣದ ಕೊಲೆಸ್ಟ್ರಾಲ್ ಅಂಶಗಳು ಈ ಪರೀಕ್ಷೆಯಲ್ಲಿ ಪತ್ತೆಯಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರಕ್ತನಾಳಗಳಲ್ಲಿ ಶೇಕಡಾ ಎಪ್ಪತ್ತಕ್ಕಿಂತ ಕಡಿಮೆ ಬ್ಲಾಕೇಜ್ ಇದ್ದಾಗ ರಕ್ತದ ಹರಿವು ಸಾಮಾನ್ಯವಾಗಿಯೇ ಇರುತ್ತದೆ, ಹೀಗಾಗಿ ಸ್ಟ್ರೆಸ್ ಟೆಸ್ಟ್ ವರದಿ ಕೂಡ ನಾರ್ಮಲ್ ಎಂದೇ ಬರುತ್ತದೆ. ಆದರೆ ಇಂತಹ ಸಣ್ಣ ಬ್ಲಾಕೇಜ್‌ಗಳು ದಿಢೀರನೆ ಒಡೆದು ಹೃದಯಾಘಾತಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಸ್ಟ್ರೆಸ್ ಟೆಸ್ಟ್ ವರದಿ ಉತ್ತಮವಾಗಿದ್ದರೂ ಸಹ, ದೇಹ ನೀಡುವ ಕೆಲವು ಪ್ರಮುಖ ಮುನ್ಸೂಚನೆಗಳನ್ನು ಅಥವಾ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಪ್ರಮುಖವಾಗಿ ಕಾಣಿಸಿಕೊಳ್ಳುವ ಐದು ಲಕ್ಷಣಗಳು ಇಲ್ಲಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಲದ ಮೇಲೆ ನಡೆಯುವಾಗ ಅಥವಾ ಕೆಲಸ ಮಾಡುವಾಗ ಎದೆಯಲ್ಲಿ ಅಸ್ವಸ್ಥತೆ, ಭಾರವಾದ ಅನುಭವ ಅಥವಾ ನೋವು ಕಾಣಿಸಿಕೊಳ್ಳುವುದು. ಸ್ವಲ್ಪ ದೂರ ನಡೆದರೂ ಅಥವಾ ಸಣ್ಣ ಕೆಲಸ ಮಾಡಿದರೂ ಅತಿಯಾಗಿ ದದುಮುಕುವಿಕೆ ಮತ್ತು ಉಸಿರಾಟದ ತೊಂದರೆ ಎದುರಾಗುವುದು. ಮುಂಚಿನಂತೆ ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಾಗದಿರುವುದು ಅಥವಾ ಬೇಗನೆ ಸುಸ್ತಾಗುವುದು. ಇದರೊಂದಿಗೆ ಕುಟುಂಬದಲ್ಲಿ ಯಾರಿಗಾದರೂ ಹೃದಯ ಕಾಯಿಲೆಯ ಇತಿಹಾಸವಿದ್ದರೆ (Family History) ಮತ್ತು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಮೆಟಬಾಲಿಕ್ ಕಾಯಿಲೆಗಳಿದ್ದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯಕವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular