HomeBeautyನಿಮ್ಮ ಚರ್ಮದ ಸೌಂದರ್ಯ ದುಪ್ಪಟ್ಟು ಮಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ನಿಮ್ಮ ಚರ್ಮದ ಸೌಂದರ್ಯ ದುಪ್ಪಟ್ಟು ಮಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.

ಹಸಿ ಹಾಲಿಗೆ ಏಲಕ್ಕಿ ಪುಡಿ ಮತ್ತು 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಮುಖದಲ್ಲಿ ಮಚ್ಚೆಗಳು ಕಲೆಗಳು ಹೆಚ್ಚಾಗಿರುವ ಸ್ಥಳದಲ್ಲಿ ಹೆಚ್ಚು ಪೇಸ್ಟ್ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೆರಡು ಬಾರಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳು, ಮೊಡವೆ ಕಲೆಗಳು ನಿವಾರಣೆಯಾಗುತ್ತದೆ. ಮುಖದಲ್ಲಿರುವ ಧೂಳು, ಕೊಳಕು ಕ್ಲೀನ್ ಆಗುತ್ತದೆ. ಮುಖದ ಹೊಳಪು ಹೆಚ್ಚಾಗುತ್ತದೆ. ಮುಖದಲ್ಲಿ ಮೂಡಿರುವ ಚಿಕ್ಕ ಚಿಕ್ಕ ಗುಳ್ಳೆಗಳು ಕೂಡ ನಿವಾರಣೆಯಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular