HomeKarnatakaವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಕಾರ್ಮಿಕ ಕಲ್ಯಾಣ ಯೋಜನೆಯಡಿ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಣಿ ಕಾರ್ಮಿಕರ, ಬೀಡಿ ತಯಾರಿಕೆ ಮತ್ತು ಚಲನಚಿತ್ರ ಕ್ಷೇತ್ರದ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಗರದ ಕೌಲ್‌ಬಜಾರ್‌ನ ಬಂಡಿಹಟ್ಟಿ ರಸ್ತೆಯ ಬೆಳಗಲ್ ಕ್ರಾಸ್ ಬಳಿಯ ಎಕ್ಸ್-ಸರ್ವೀಸ್ ಕಾಲೋನಿಯ ನಂ.171 ಐಒಎಂಸಿ ಎಸ್‌ಸಿಎಂ ಕಚೇರಿಗೆ ಸಂಪರ್ಕಿಸಬಹುದು ಎಂದು ಕಾರ್ಮಿಕ ಕಲ್ಯಾಣ ಸಂಸ್ಥೆಯ ವೈದ್ಯಕೀಯ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ  ಇಲಾಖೆ: ರಿಯಾಯಿತಿ ದರದಲ್ಲಿ ಸಸಿಗಳ ವಿತರಣೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸಕ್ತ 2026-27ನೇ ಸಾಲಿನಲ್ಲಿ ಸಾರ್ವಜನಿಕರಿಗೆ, ಸರ್ಕಾರಿ ಇಲಾಖೆಗಳಿಗೆ, ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಒಟ್ಟು 1,17,000 ವಿವಿಧ ತಳಿಯ ಸಸಿಗಳನ್ನು ಬೆಳೆಸಲಾಗಿದ್ದು, ವಿತರಣೆಗೆ ಸಿದ್ಧಗೊಳಿಸಲಾಗಿದೆ.

ಅರಣ್ಯ ಇಲಾಖೆಯು ಜಿಲ್ಲೆಯ ವಿವಿಧ ವಲಯಗಳ ಸಸ್ಯಕ್ಷೇತ್ರಗಳಲ್ಲಿ (ನರ್ಸರಿ) ಆಯಾ ಭಾಗದ ಮಣ್ಣು ಮತ್ತು ಹವಾಮಾನಕ್ಕೆ ಸೂಕ್ತವಾದ ಸಸಿಗಳನ್ನು ಪೋಷಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ತಮ್ಮ ಜಮೀನು, ಮನೆ ಅಂಗಳ ಅಥವಾ ಸಂಸ್ಥೆಗಳ ಆವರಣದಲ್ಲಿ ನೆಡಲು 6*9 ಗಾತ್ರದ ಸಸಿಗಳನ್ನು ತಲಾ 3 ರೂ. ಹಾಗೂ 8*12 ಗಾತ್ರದ ಸಸಿಗಳನ್ನು ತಲಾ 6 ರೂ. ಗಳ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

*ವಲಯವಾರು ಲಭ್ಯವಿರುವ ಸಸಿಗಳ ವಿವರ ಮತ್ತು ಸಂಪರ್ಕ ಅಧಿಕಾರಿಗಳು:**

ಬಳ್ಳಾರಿ ವಲಯ (ಬೆಳಗಲ್ ಕ್ರಾಸ್ ಸಸ್ಯಕ್ಷೇತ್ರ): 6*9 ಗಾತ್ರ – 8 ಸಾವಿರ, 8*12 ಗಾತ್ರ – 47 ಸಾವಿರ, ಮಾಹಿತಿಗಾಗಿ ಗಿರೀಶ್ ಕುಮಾರ್ ಡಿ.ಕೆ (ಮೊ.9986274204).

ಸಿರುಗುಪ್ಪ ವಲಯ (ಬೆಳಗಲ್ ಕ್ರಾಸ್ ಸಸ್ಯಕ್ಷೇತ್ರ): 6*9 ಗಾತ್ರ – 4 ಸಾವಿರ, 8*12 ಗಾತ್ರ – 5 ಸಾವಿರ, ಮಾಹಿತಿಗಾಗಿ ಕಾಂತರಾಜ್.ಕೆ (ಮೊ.9844637989).

ಸಂಡೂರು ಉತ್ತರ ವಲಯ (ರಾಘಾಪುರ ಸಸ್ಯಕ್ಷೇತ್ರ): 6*9 ಗಾತ್ರ – 4 ಸಾವಿರ, 8*12 ಗಾತ್ರ – 23,500. ಮಾಹಿತಿಗಾಗಿ ಬಿ.ಎನ್ ಮಂಜುನಾಥ (ಮೊ.9480558102).

ಸಂಡೂರು ದಕ್ಷಿಣ ವಲಯ (ಅಂಕಮನಹಾಳ್ ಸಸ್ಯಕ್ಷೇತ್ರ): 6*9 ಗಾತ್ರ – 4 ಸಾವಿರ, 8*12 ಗಾತ್ರ – 21,500. ಮಾಹಿತಿಗಾಗಿ ಸೈಯದ್ ದಾದಾ ಖಲಂದರ್ (ಮೊ.8147253742).

*ಲಭ್ಯವಿರುವ ಪ್ರಮುಖ ಸಸಿಗಳ ಜಾತಿಗಳು:* ಬೇವು, ಹೊಂಗೆ, ಅರಳಿ, ಆಲ, ಅತ್ತಿ, ಬೆಟ್ಟದ ನಲ್ಲಿ, ಸಾಗವಾನಿ, ಮಾಗಣಿ, ಶ್ರೀಗಂಧ, ರಕ್ತಚಂದನ, ಹೆಬ್ಬೇವು, ಬಿದಿರು, ನೇರಳೆ, ಸೀತಾಫಲ, ನುಗ್ಗೆ, ನೆಲ್ಲಿ ಇತ್ಯಾದಿ.

ರೈತರು ತಮ್ಮ ಖಾಸಗಿ ಜಮೀನುಗಳಲ್ಲಿ ನೆಟ್ಟು ಬೆಳೆಸುವ ಸಸಿಗಳಿಗೆ ಬದುಕುಳಿದ ಆಧಾರದ ಮೇಲೆ ಅರಣ್ಯ ಇಲಾಖೆಯಿಂದ 3 ವರ್ಷಗಳ ಅವಧಿಗೆ ಒಟ್ಟು 125 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.ಮೊದಲನೇ ವರ್ಷದ ಕೊನೆಯಲ್ಲಿ ಪ್ರತಿ ಬದುಕುಳಿದ ಸಸಿಗೆ ರೂ. 35, ಎರಡನೇ ವರ್ಷದ ಕೊನೆಯಲ್ಲಿ ಪ್ರತಿ ಬದುಕುಳಿದ ಸಸಿಗೆ ರೂ. 40, ಮೂರನೇ ವರ್ಷದ ಕೊನೆಯಲ್ಲಿ ಪ್ರತಿ ಬದುಕುಳಿದ ಸಸಿಗೆ ರೂ. 50.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವುದು ಇಂದಿನ ಅಗತ್ಯವಾಗಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ರೈತರು, ಶಾಲಾ-ಕಾಲೇಜುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆಯ ಸದುಪಯೋಗ ಪಡೆದುಕೊಂಡು, ಪರಿಸರ ಸಂರಕ್ಷಣೆಯ ಮಹಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಅಥವಾ ಸಸಿಗಳನ್ನು ಕಾಯ್ದಿರಿಸಲು ಆಯಾ ವಲಯದ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular