HomeIndiaಶಸ್ತ್ರಚಿಕಿತ್ಸೆ ವೇಳೆ ಮಹಾ ಎಡವಟ್ಟು ; ಬಾಣಂತಿ ಹೊಟ್ಟೆಯಲ್ಲೇ ಗ್ಲೌಸ್ ಬಿಟ್ಟು ಹೊಲಿದ ವೈದ್ಯರು !

ಶಸ್ತ್ರಚಿಕಿತ್ಸೆ ವೇಳೆ ಮಹಾ ಎಡವಟ್ಟು ; ಬಾಣಂತಿ ಹೊಟ್ಟೆಯಲ್ಲೇ ಗ್ಲೌಸ್ ಬಿಟ್ಟು ಹೊಲಿದ ವೈದ್ಯರು !

ಸರ್ಕಾರಿ ಆಸ್ಪತ್ರೆಯ ವೈದ್ಯರ ಘೋರ ನಿರ್ಲಕ್ಷ್ಯಕ್ಕೆ 19 ವರ್ಷದ ನವವಿವಾಹಿತ ಬಾಣಂತಿಯೊಬ್ಬಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಸಿ-ಸೆಕ್ಷನ್ (ಸಿಸೇರಿಯನ್) ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಸರ್ಜಿಕಲ್ ಗ್ಲೌಸ್ ಹಾಗೂ ಟಿಶ್ಯೂ ಪೇಪರ್‌ಗಳನ್ನು ಆಕೆಯ ಹೊಟ್ಟೆಯೊಳಗೇ ಬಿಟ್ಟು ಹೊಲಿಗೆ ಹಾಕಿರುವ ಅಮಾನವೀಯ ಕೃತ್ಯ ಬಯಲಾಗಿದೆ.

ಸಂಧ್ಯ ಸೂರಜ್ ಗಾಯಕ್‌ವಾಡ್ (19) ಎಂಬ ಯುವತಿ ಆಗಸ್ಟ್ 1 ರಂದು ಹೆರಿಗೆಗಾಗಿ ಬೀಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿದ್ದು, ನಾಲ್ಕು ದಿನಗಳ ಬಳಿಕ ಆಕೆಯನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದರು. ಆದರೆ ಮನೆಗೆ ತೆರಳಿದ ಕೆಲವೇ ದಿನಗಳಲ್ಲಿ ಆಕೆಗೆ ಅಸಹನೀಯ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿ ವೈದ್ಯರು ಸ್ಕ್ಯಾನಿಂಗ್ ನಡೆಸಿದಾಗ ಬಾಣಂತಿಯ ಹೊಟ್ಟೆಯೊಳಗೆ ಅನ್ಯ ವಸ್ತುಗಳು ಇರುವುದು ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಪುಣೆಯ ಸಸೂನ್ ಆಸ್ಪತ್ರೆಗೆ ಸ್ಥಳಾಂತರಿಸಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈ ವೇಳೆ ವೈದ್ಯರು ಆಕೆಯ ಹೊಟ್ಟೆಯೊಳಗೆ ಸಿಲುಕಿಕೊಂಡಿದ್ದ ಸರ್ಜಿಕಲ್ ಕೈಗವಸುಗಳು ಮತ್ತು ಪೇಪರ್ ಟಿಶ್ಯೂ ವೈಪ್ಸ್‌ಗಳನ್ನು ಹೊರತೆಗೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಅತಿಯಾದ ಬೇಜವಾಬ್ದಾರಿಯಿಂದಾಗಿ ಹೆತ್ತ ಕಂದಮ್ಮನನ್ನು ಎತ್ತಿಕೊಳ್ಳಲೂ ಶಕ್ತಿಯಿಲ್ಲದೆ ಯುವತಿ ನರಳಾಡುತ್ತಿದ್ದು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಈ ಸಂಬಂಧ ಕುಟುಂಬಸ್ಥರು ಮಂಗಳವಾರ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಗೆ ಅಧಿಕೃತ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೀಡ್ ಜಿಲ್ಲಾ ಸರ್ಜನ್ ಸತೀಶ್ ಕುಮಾರ್ ಸೋಲಂಕೆ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular