HomeIndia20 ರೂ. ಲಂಚ ಪಡೆದ ಪ್ರಕರಣಕ್ಕೆ 3 ದಶಕಗಳ ಬಳಿಕ ಮುಕ್ತಿ ; ಇಬ್ಬರು ಸರ್ಕಾರಿ...

20 ರೂ. ಲಂಚ ಪಡೆದ ಪ್ರಕರಣಕ್ಕೆ 3 ದಶಕಗಳ ಬಳಿಕ ಮುಕ್ತಿ ; ಇಬ್ಬರು ಸರ್ಕಾರಿ ನೌಕರರಿಗೆ ಕೊನೆಗೂ ರಿಲೀಫ್‌ !

ಕೇವಲ 20 ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಗುಜರಾತ್ ಸರ್ಕಾರದ ಇಬ್ಬರು ನೌಕರರ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವೊಂದು ಬರೋಬ್ಬರಿ ಮೂರು ದಶಕಗಳ (30 ವರ್ಷ) ದೀರ್ಘ ವಿಚಾರಣೆಯ ನಂತರ ಅಂತ್ಯ ಕಂಡಿದೆ. ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಸಾಬೀತಾಗದ ಹೊರತು, ಕೇವಲ 20 ರೂ. ಜಪ್ತಿ ಮಾಡಿಕೊಂಡ ಮಾತ್ರಕ್ಕೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ಇಬ್ಬರೂ ನೌಕರರನ್ನು ದೋಷಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ನ್ಯಾಯಪೀಠವು ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ಈ ಹಿಂದೆ ನೀಡಿದ್ದ ಶಿಕ್ಷೆಯ ಆದೇಶವನ್ನು ರದ್ದುಗೊಳಿಸಿ, ಗುಮಾಸ್ತ (Clerk) ಹಾಗೂ ಕಚೇರಿ ಸಹಾಯಕನನ್ನು (Peon) ಆರೋಪಮುಕ್ತಗೊಳಿಸಿದೆ.

ಏನಿದು 30 ವರ್ಷಗಳ ಹಳೆಯ ಪ್ರಕರಣ? ಈ ಪ್ರಕರಣವು 1996ರ ಫೆಬ್ರವರಿಯಲ್ಲಿ ನಡೆದಿತ್ತು. ಗುಜರಾತ್‌ನ ಆನಂದ್ ಜಿಲ್ಲೆಯ ಬೆಚಾರಿ ಗ್ರಾಮ ಪಂಚಾಯತ್ ಕಚೇರಿಗೆ ವಿದ್ಯಾರ್ಥಿಯೊಬ್ಬ ಶೈಕ್ಷಣಿಕ ರಿಯಾಯಿತಿಗಾಗಿ ಆದಾಯ ಪ್ರಮಾಣಪತ್ರ ಪಡೆಯಲು ತೆರಳಿದ್ದ. ಆ ವೇಳೆ ಗುಮಾಸ್ತ ತನಗೆ 100 ರೂ. ಮತ್ತು ಪ್ಯೂನ್‌ಗೆ 20 ರೂ. ಸೇರಿ ಒಟ್ಟು 120 ರೂ. ಲಂಚ ಕೇಳಿದ್ದಾನೆ ಎಂದು ವಿದ್ಯಾರ್ಥಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಗುರುತು ಮಾಡಿದ 120 ರೂ. ನೋಟುಗಳನ್ನು ಕೊಟ್ಟು ಕಳುಹಿಸಿದ್ದರು. ಪ್ರಮಾಣಪತ್ರ ಪಡೆದ ಬಳಿಕ ವಿದ್ಯಾರ್ಥಿ ಪ್ಯೂನ್‌ಗೆ 20 ರೂ. ನೀಡಿದ್ದು, ದಾಳಿ ನಡೆಸಿದ ಅಧಿಕಾರಿಗಳು ಪ್ಯೂನ್ ಬಳಿಯಿದ್ದ 20 ರೂ. ವಶಪಡಿಸಿಕೊಂಡಿದ್ದರು. ಆದರೆ ಗುಮಾಸ್ತನ ಬಳಿ ಯಾವುದೇ ಹಣ ಪತ್ತೆಯಾಗಿರಲಿಲ್ಲ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲಂಚಕ್ಕೆ ಅಧಿಕೃತ ಬೇಡಿಕೆ ಇಟ್ಟಿದ್ದೇ ಸಾಬೀತಾಗದಿರುವಾಗ, ಕೇವಲ 20 ರೂ. ವಶಪಡಿಸಿಕೊಂಡಿದ್ದನ್ನೇ ಆಧಾರವಾಗಿಟ್ಟುಕೊಂಡು ಶಿಕ್ಷೆ ವಿಧಿಸಲಾಗದು ಎಂದು ತಿಳಿಸಿದ ಸುಪ್ರೀಂ ಕೋರ್ಟ್, 30 ವರ್ಷಗಳಿಂದ ನಡೆಯುತ್ತಿದ್ದ ಈ ಸುದೀರ್ಘ ಕಾನೂನು ಹೋರಾಟಕ್ಕೆ ಪೂರ್ಣವಿರಾಮ ಇಟ್ಟಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular