HomeKarnatakaBIG NEWS: ಒಂದೆರಡು ದಿನ ನಾನು ತಡ ಮಾಡಿದ್ರೆ ರಾಜಕೀಯವಾಗಿಯೇ ನನ್ನ ಮುಗಿಸುವ ಕಾರ್ಯ ನಡೆದಿತ್ತು:...

BIG NEWS: ಒಂದೆರಡು ದಿನ ನಾನು ತಡ ಮಾಡಿದ್ರೆ ರಾಜಕೀಯವಾಗಿಯೇ ನನ್ನ ಮುಗಿಸುವ ಕಾರ್ಯ ನಡೆದಿತ್ತು: ಸಿ.ಪಿ.ಯೋಗೇಶ್ವರ್ ವಾಗ್ದಾಳಿ

ಚನ್ನಪಟ್ಟಣ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು. ರಾಜಕೀಯವಾಗಿ ನನ್ನ ಮುಗಿಸುವ ಯತ್ನ ನಡೆದಿತ್ತು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಒಂದೆರಡು ದಿನ ನಾನು ತಡ ಮಾಡಿದ್ರೇ ರಾಜಕೀಯವಾಗಿಯೇ ನನ್ನನ್ನು ಮುಗಿಸುವ ಕಾರ್ಯ ನಡೆದಿತ್ತು ಎಂದು ಹೇಳಿದ್ದಾರೆ.

ಟಿಕೆಟ್ ಕೊಡ್ತೀನಿ, ಕೊಡ್ತೀನಿ ಅಂತಾ ಸತಾಯಿಸಿದ್ರು. ಅಧ್ಯಕ್ಷರು ಟಿಕೆಟ್ ಕೊಡಿಸಿದ್ರೆ ನಾನ್ಯಾಕೆ ಕಾಂಗ್ರೆಸ್ ಸೇರ್ತಿದ್ದೆ? ಎಂದು ಬಿಜೆಪಿ ವಿರುದ್ಧ ಯೋಗೇಶ್ವರ್ ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚನ್ನಪಟ್ಟಣದ ಟಿಕೆಟ್ ಕೇಳಿದಾಗ ಹೆಚ್.ಡಿ.ಕುಮಾರಸ್ವಾಮಿ ಕೂಡ ಹಾರಿಕೆ ಉತ್ತರ ನೀಡಿದರು. ಚನ್ನಪಟ್ಟಣ ಅಲ್ಲೇ ಇದೆ ಎಲ್ಲಿ ಹೋಗಿದೆ…ಅಂತ ಕೇಳಿದರು. ಅಲ್ಲಿಗೆ ನಿಖಿಲ್ ಅವರನ್ನು ಸ್ಪರ್ಧೆಗೆ ಇಳಿಸುವುದು ನಿಖರವಾಗಿ ತಿಳಿದಿತ್ತು. ಹಾಗಾಗಿ ತಡ ಮಾಡದೇ ನಾನು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಸಿ.ಪಿ.ಯೋಗೆಶ್ವರ್ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular