ಬೆಂಗಳೂರು : ಬಿಗ್ ಬಾಸ್ (BIGGBOSS) ಮನೆಗೆ ಖ್ಯಾತ ನಿರೂಪಕಿ ರಾಧಾ ಹೀರೆಗೌಡರ್ ಎಂಟ್ರಿಯಾಗಿದೆ.
ಸುದ್ದಿವಾಹಿನಿಯಲ್ಲಿ ಖಡಕ್ ಪ್ರಶ್ನೆ, ಸಿಡಿಮದ್ದಿನಂತೆ ಮಾತನಾಡುವ ಖಡಕ್, ಖ್ಯಾತ ನಿರೂಪಕಿ ರಾಧಾ ಹೀರೆಗೌಡರ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ರಾಧಾ ಹಿರೇಗೌಡರ್ ಎಂಟ್ರಿಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಈ ಹಿಂದಿನ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಗೆ ರಾಧಾಗೌಡರ್ ಬರಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ ಬಂದಿರಲಿಲ್ಲ. ಇದೀಗ ಬಿಗ್ ಬಾಸ್-11 ರ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ರಾಧಾ ಹೀರೆಗೌಡರ್ ಆಗಮಿಸಿದ್ದಾರೆ. ಸದ್ಯ, ಬಿಡುಗಡೆಯಾದ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ರಾಧಾ ಹೀರೆಗೌಡರ್ ಅವರು ತ್ರಿವಿಕ್ರಮ್ಗೆ “ಏನ್ ಕೊಡ್ತೀರಿ ಕನ್ನಡ ಜನತೆಗೆ?” ಎಂದು ಕೇಳಿದ್ದಾರೆ. ಆಗ ತ್ರಿವಿಕ್ರಮ್ ಅವರು ಮನರಂಜನೆ ಕೊಡ್ತೀವ’ ಎಂದು ಹೇಳಿದ್ದಾರೆ. ಆಗ ರಾಧಾ ಅವರು ‘ನನ್ನನ್ನು ನಗಿಸಿ’ ನೋಡೋಣ ಎಂದಿದ್ದಾರೆ. ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದ ರಾಧಾ ಹೀರೆಗೌಡರ್ ಎಷ್ಟು ದಿನ ಇರ್ತಾರೆ ಕಾದು ನೋಡಬೇಕಾಗಿದೆ.
https://twitter.com/ColorsKannada/status/1849269501017325620?ref_src=twsrc%5Etfw%7Ctwcamp%5Etweetembed%7Ctwterm%5E1849269501017325620%7Ctwgr%5Ea9f489389d84c1865f979fd7a1fc66a6a236d438%7Ctwcon%5Es1_c10&ref_url=http%3A%2F%2Fapi-news.dailyhunt.in%2F

