HomeKarnatakaಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: SIT ತನಿಖೆ ಪೂರ್ಣ: ಮಾನಸಿಕ ಖಿನ್ನತೆಯಿಂದಲೇ ಸೂಸೈಡ್ ಎಂದು ನಿರ್ಧಾರ

ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: SIT ತನಿಖೆ ಪೂರ್ಣ: ಮಾನಸಿಕ ಖಿನ್ನತೆಯಿಂದಲೇ ಸೂಸೈಡ್ ಎಂದು ನಿರ್ಧಾರ

ಬೆಂಗಳೂರು: ಪ್ರತಿಷ್ಠಿತ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ, ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಎಸ್ ಐಟಿ ತನಿಖೆ ಪೂರ್ಣಗೊಳಿಸಿದೆ. ಮಾನಸಿಕ ಖಿನ್ನತೆಯಿಂದಲೇ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ನಿರ್ಧಾರಕ್ಕೆ ಎಸ್ ಐಟಿ ತಂಡ ಬಂದಿದೆ.

ಐಟಿ ಅಧಿಕಾರಿಗಳ ಒತ್ತಡಕ್ಕೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ ಐಟಿಗೆ ವಹಿಸಿತ್ತು. ತನಿಖೆ ವೇಳೆ ಹಲವಾರು ವಿಚಾರಗಳು ಬೆಳಿಕೆಗೆ ಬಂದಿವೆ.

ಸಿ.ಜೆ.ರಾಯ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರು. ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೆಲ ತಿಂಗಳಿಂದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದರು. ಸಾವಿಗೆ ಒಂದು ತಿಂಗಳಿಂದ ಮಾತ್ರೆಗಳನ್ನು ಸೇವಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆ ಯಾವ ಕಾರಣಕ್ಕೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಯಾವುದೇ ಒತ್ತಡವೂ ಕಾರಣವಲ್ಲವೆಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯಮಿ ಸಿ.ಜೆ.ರಾಯ್ ಬೆಂಗಳೂರಿನ ಲ್ಯಾಂಗ್ ಫೋರ್ಡ್ ಟೌನ್ ನಲ್ಲಿರುವ ತಮ್ಮ ಕಚೇರಿಯಲ್ಲಿಯೇ ಸಿ,ಜೆ.ರಾಯ್, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅಂದು ಐಟಿ ಅಧಿಕಾರಿಗಳು ಅವರ ಕಚೇರಿಯಲ್ಲಿದ್ದರು. ಅವರೊಂದಿಗೆ ಮಾತನಾಡುತ್ತಿದ್ದ ಸಿ.ಜೆ.ರಾಯ್ ಕೆಲ ಸಮಯದಲ್ಲಿಯೇ ಬರುತ್ತೇನೆಂದು ತನ್ನ ಚೇಂಬರ್ ಗೆ ಹೋದವರು ಗುಂಡು ಹಾರಿಸಿಕೊಂಡಿ ಸಾವನ್ನಪ್ಪಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular