ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಿಂದ ಗ್ರೂಪ್ ಅಡ್ಮಿನ್ ಗಳಿಗೆ ಡಿಲೀಟ್ ಅಧಿಕಾರ ನೀಡಲಾಗಿದೆ.
ಗುಂಪಿನಲ್ಲಿ ಸದಸ್ಯರು ಪೋಸ್ಟ್ ಮಾಡುವ ಯಾವುದೇ ಫೋಟೋ, ವಿಡಿಯೋ, ಸಂದೇಶಗಳನ್ನು ಡಿಲೀಟ್ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದುವರೆಗೆ ವಿಡಿಯೋ, ಫೋಟೋ, ಸಂದೇಶ ಪೋಸ್ಟ್ ಮಾಡಿದ ಸದಸ್ಯರಿಗೆ ಮಾತ್ರ ಅದನ್ನು ಡಿಲೀಟ್ ಮಾಡುವ ಅಧಿಕಾರ ಇತ್ತು.
ವಿವಾದಿತ ಪೋಸ್ಟ್ ಗಳನ್ನು ಹಾಕಿದ ಸಂದರ್ಭದಲ್ಲಿ ಅದನ್ನು ಡಿಲೀಟ್ ಮಾಡುವಂತೆ ಅಡ್ಮಿನ್ ಆಗಿದ್ದವರು ಸದಸ್ಯರಿಗೆ ಹೇಳಬೇಕಿತ್ತು. ಆದರೆ, ಈಗ ಡಿಲೀಟ್ ಫಾರ್ ಆಲ್ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಅಡ್ಮಿನ್ ಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಸದಸ್ಯರು ಹಾಕಿದ ಯಾವುದೇ ಪೋಸ್ಟ್, ಫೋಟೋ, ವಿಡಿಯೋಗಳನ್ನು ಅಳಿಸಿ ಹಾಕಬಹುದಾಗಿದೆ.