HomeLatest Newsವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ :  ಟ್ರೈನ್ ಟಿಕೆಟ್ ದರದಲ್ಲೇ  ಈಗ 'ಏರ್ ಇಂಡಿಯಾ' ಫ್ಲೈಟ್...

ವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ :  ಟ್ರೈನ್ ಟಿಕೆಟ್ ದರದಲ್ಲೇ  ಈಗ ‘ಏರ್ ಇಂಡಿಯಾ’ ಫ್ಲೈಟ್ ಟಿಕೆಟ್.!

ವಿಮಾನ ಪ್ರಯಾಣವು ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಬಸ್ ಮತ್ತು ರೈಲು ಪ್ರಯಾಣಕ್ಕೆ ಹೋಲಿಸಿದರೆ ವಿಮಾನದ ಟಿಕೆಟ್ ದರಗಳು ಅತ್ಯಂತ ದುಬಾರಿಯಾಗಿದ್ದವು. ಆದರೆ ಸಾಮಾನ್ಯ ಜನರಿಗೂ ಆಕಾಶದಲ್ಲಿ ಹಾರಾಡಬೇಕೆಂಬ ಆಸೆ ಇರುತ್ತದೆ. ಇದನ್ನು ಮನಗಂಡು ವಿಮಾನಯಾನ ಸಂಸ್ಥೆಗಳು ಆಗಾಗ್ಗೆ ವಿಶೇಷ ರಿಯಾಯಿತಿ ದರಗಳನ್ನು ಪ್ರಕಟಿಸುತ್ತಿವೆ. ಇತ್ತೀಚೆಗಷ್ಟೇ ಇಂಡಿಗೋ ಏರ್‌ಲೈನ್ಸ್ ರಿಯಾಯಿತಿ ಘೋಷಿಸಿದ ಬೆನ್ನಲ್ಲೇ, ಈಗ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಕೂಡ ಭರ್ಜರಿ ‘ಪೇ ಡೇ ಸೇಲ್’ (Pay Day Sale) ಹೊತ್ತು ತಂದಿದೆ.

ಹೌದು. ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಭರ್ಜರಿ ಸಿಹಿ ಸುದ್ದಿ ನೀಡಿದ್ದು, ರೈಲು ಟಿಕೆಟ್ ದರದಲ್ಲೇ ವಿಮಾನ ಪ್ರಯಾಣ ಮಾಡುವ ಸುವರ್ಣಾವಕಾಶ ಕಲ್ಪಿಸಿದೆ. ತನ್ನ ವಿಶೇಷ ‘ಪೇ ಡೇ ಸೇಲ್’ (Pay Day Sale) ಅಡಿಯಲ್ಲಿ ಕೇವಲ ₹1,450 ಆರಂಭಿಕ ದರದಲ್ಲಿ ದೇಶೀಯ ವಿಮಾನ ಟಿಕೆಟ್‌ಗಳನ್ನು ಘೋಷಿಸಿದೆ. ಬಜೆಟ್ ದರದಲ್ಲಿ ಹಾರಾಟ ನಡೆಸಲು ಬಯಸುವವರಿಗಾಗಿ ಈ ಆಫರ್ ನೀಡಲಾಗಿದ್ದು, ಮಾರ್ಚ್ 1ರ ಒಳಗೆ ಟಿಕೆಟ್ ಬುಕ್ ಮಾಡುವವರು ಈ ವರ್ಷದ ಅಕ್ಟೋಬರ್ 8ರ ವರೆಗಿನ ಅವಧಿಯಲ್ಲಿ ಯಾವಾಗ ಬೇಕಾದರೂ ಪ್ರಯಾಣಿಸಬಹುದಾಗಿದೆ.

ಆಫರ್‌ ಹೇಗಿದೆ..?

ಬುಕ್ಕಿಂಗ್ ಅವಧಿ: ಫೆಬ್ರವರಿ 24 ರಿಂದ ಮಾರ್ಚ್ 1 ರವರೆಗೆ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಯಾಣದ ಅವಧಿ: ಈಗ ಬುಕ್ ಮಾಡಿದ ಟಿಕೆಟ್ ಬಳಸಿ ಈ ವರ್ಷದ ಮಾರ್ಚ್ 3 ರಿಂದ ಅಕ್ಟೋಬರ್ 8 ರ ನಡುವೆ ಯಾವಾಗ ಬೇಕಾದರೂ ಪ್ರಯಾಣಿಸಬಹುದು.

ಆರಂಭಿಕ ದರ (ದೇಶೀಯ): ‘ಎಕ್ಸ್‌ಪ್ರೆಸ್ ಲೈಟ್’ (Express Lite) ದರಗಳು ಕೇವಲ ₹1,450 ರಿಂದ ಪ್ರಾರಂಭವಾಗುತ್ತವೆ. ‘ಎಕ್ಸ್‌ಪ್ರೆಸ್ ವ್ಯಾಲ್ಯೂ’ ದರಗಳು ₹1,500 ರಿಂದ ಆರಂಭ.

ಆರಂಭಿಕ ದರ (ಅಂತಾರಾಷ್ಟ್ರೀಯ): ವಿದೇಶಿ ಪ್ರಯಾಣದ ಟಿಕೆಟ್ ದರಗಳು ಕೇವಲ ₹6,655 ರಿಂದ ಪ್ರಾರಂಭವಾಗುತ್ತವೆ.

ಬುಕ್ಕಿಂಗ್ ಮಾಡುವುದು ಹೇಗೆ?

ಈ ವಿಶೇಷ ರಿಯಾಯಿತಿ ದರಗಳು ಕೇವಲ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅಧಿಕೃತ ವೆಬ್‌ಸೈಟ್ (airindiaexpress.com) ಅಥವಾ ಅವರ ಮೊಬೈಲ್ ಆಪ್ ಮೂಲಕ ಬುಕ್ ಮಾಡಿದರೆ ಮಾತ್ರ ಲಭ್ಯವಿರುತ್ತವೆ. ಈ ಬುಕ್ಕಿಂಗ್‌ಗೆ ಯಾವುದೇ ಹೆಚ್ಚುವರಿ ‘ಕನ್ವೀನಿಯನ್ಸ್ ಫೀ’ (Convenience Fee) ವಿಧಿಸಲಾಗುವುದಿಲ್ಲ.

ಗಮನಿಸಬೇಕಾದ ಅಂಶಗಳು:

  • ಮೊದಲು ಬಂದವರಿಗೆ ಆದ್ಯತೆ: ಈ ಆಫರ್ ಅಡಿಯಲ್ಲಿ ಸೀಟುಗಳು ಸೀಮಿತವಾಗಿವೆ. ಹಾಗಾಗಿ ಮೊದಲು ಬುಕ್ ಮಾಡಿದವರಿಗೆ ಮಾತ್ರ ಕಡಿಮೆ ದರದ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು.
  • ದರಗಳ ವಿವರ: ಈ ದರಗಳಲ್ಲಿ ಬೇಸ್ ಫೇರ್, ತೆರಿಗೆಗಳು ಮತ್ತು ಏರ್‌ಪೋರ್ಟ್ ಶುಲ್ಕಗಳು ಸೇರಿವೆ. ಆದರೆ ಇತರ ಹೆಚ್ಚುವರಿ ಸೇವಾ ಶುಲ್ಕಗಳು ಇದರಲ್ಲಿ ಸೇರಿರುವುದಿಲ್ಲ.
  • ಎಲ್ಲಾ ಮಾರ್ಗಗಳಿಗೂ ಅನ್ವಯಿಸುವುದಿಲ್ಲ: ಈ ರಿಯಾಯಿತಿಯು ಆಯ್ದ ಮಾರ್ಗಗಳು ಮತ್ತು ಆಯ್ದ ದಿನಾಂಕಗಳಿಗೆ ಮಾತ್ರ ಅನ್ವಯವಾಗಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular