ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ವಶದಲ್ಲಿದ್ದ ಬಿಎಸ್ಎಫ್ ಯೋಧ ಪುರ್ನಾಮ್ ಶಾ ನನ್ನು 20 ದಿನಗಳ ಬಳಿಕ ಬಿಟ್ಟು ಕಳುಹಿಸಿದೆ.
ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್ ಎಫ್ ಯೋಧರೊಬ್ಬರನ್ನು ಪಾಕಿಸ್ತಾನ ರೇಂಜರ್ ಗಳು ವಶಕ್ಕೆ ಪಡೆದುಕೊಂಡಿದ್ದರು. ಪಂಜಾಬ್ ನ ಫಿರೋಜ್ ಪುರದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ ಎಫ್ ಯೋಧರೊಬ್ಬರು ಅಂತರಾಷ್ಟ್ರೀಯ ಗಡಿ ದಾಟಿದ್ದು, ಇದೇ ವೇಳೆ ಪಾಕಿಸ್ತಾನ ರೇಂಜರ್ ಗಳು ಅವರನ್ನು ವಶಕ್ಕೆ ಪಡೆದಿದ್ದರು. ಸುಮಾರು 20 ದಿನದ ಬಳಿಕ ಪುರ್ನಾಮ್ ಶಾನನ್ನು ಬಿಟ್ಟು ಕಳುಹಿಸಿದ್ದಾರೆ. ಅಟಾರಿ ಗಡಿ ಮೂಲಕ ಯೋಧ ಬಾರತಕ್ಕೆ ವಾಪಸ್ ಆಗಿದ್ದಾರೆ.

