HomeKarnatakaಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್: ಹಾರ ಬದಲಿಸಿಕೊಂಡು ತಾಳಿ ಕಟ್ಟುವ ವೇಳೆಯಲ್ಲಿ ಮದುವೆ ನಿರಾಕರಿಸಿದ ವಧು

ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್: ಹಾರ ಬದಲಿಸಿಕೊಂಡು ತಾಳಿ ಕಟ್ಟುವ ವೇಳೆಯಲ್ಲಿ ಮದುವೆ ನಿರಾಕರಿಸಿದ ವಧು

ಮಂಗಳೂರು: ಮದುವೆ ಮಂಟಪದಲ್ಲಿ ತಾಳಿ ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ವಧು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ನೆಲ್ಯಾಡಿ, ಕೊಣಾಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಉಮೇಶ ಅವರ ಮದುವೆ ಬಂಟ್ವಾಳ ತಾಲೂಕಿನ ಯುವತಿಯೊಂದಿಗೆ ನಿಗದಿಯಾಗಿತ್ತು. ಕಾಂಚನ ಪೆರ್ಲ ಷಣ್ಮುಖ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ಮದುವೆ ನಡೆಸಿ ನಂತರ ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ಏರ್ಪಡಿಸಲಾಗಿತ್ತು. ವಧು ಮತ್ತು ವರನ ಮನೆಯವರು ಸಂಬಂಧಿಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು.

ಶುಕ್ರವಾರ ಮದುವೆ ಮಂಟಪದಲ್ಲಿ ವಧು-ವರ ಪರಸ್ಪರ ಹಾರ ಹಾಕಿಕೊಂಡಿದ್ದಾರೆ. ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ಮದುವೆ ಇಷ್ಟವಿಲ್ಲ ಎಂದು ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ್ದಾರೆ. ಉಮೇಶನಿಗೆ ತಾಳಿ ಕಟ್ಟಲು ವಧು ಅವಕಾಶ ಕೊಟ್ಟಿಲ್ಲ. ಆಗ ಎರಡೂ ಕಡೆಯವರು ವಧುವಿನ ಮನವೊಲಿಸಲು ಮುಂದಾದರೂ ಆಕೆ ತಾಳಿ ಕಟ್ಟಿಸಿಕೊಳ್ಳಲು ಒಪ್ಪಿಕೊಂಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾತುಕತೆಯ ನಂತರ ಆಗಿರುವ ಆಚಾತುರ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ ವಧು ಉಮೇಶ್ ಅವರನ್ನು ಮದುವೆಯಾಗಲು ಒಪ್ಪಿದ್ದಾರೆ. ಆದರೆ, ಇದಕ್ಕೆ ಉಮೇಶ ಒಪ್ಪಲಿಲ್ಲ. ಕೊನೆಗೆ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟು ತಮ್ಮ ಊರುಗಳಿಗೆ ತೆರಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular