ಬೀದರ್: ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಬಳಿಕ ಮಹಿಳೆಯ ಸಾವು ಕಂಡ ಆರೋಪ ಕೇಳಿಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿರುವುದಾಗಿ ಆರೋಪಿಸಿ ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ.
ಪ್ರಜನನ ಆರೋಗ್ಯ ಕುಟುಂಬ ಯೋಜನೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಬೀದರ್ ತಾಲೂಕಿನ ಚಿಮಕೋಡ್ ಗ್ರಾಮದ ಮೀನಾಕ್ಷಿ(30) ಮೃತಪಟ್ಟವರು. ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ಮೀನಾಕ್ಷಿ ಮಕ್ಕಳಾಗದಂತೆ ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿಸಿಕೊಂಡಿದ್ದರು.
ಆದರೆ, ವೈದ್ಯರ ನಿರ್ಲಕ್ಷ್ಯದಿಂದ ಅವರು ಮೃತಪಟ್ಟಿರುವುದಾಗಿ ಬೀದರ್ ನ ಜನವಾಡ ರಸ್ತೆಯಲ್ಲಿರುವ ಪ್ರಜನನ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಲಾಗಿದೆ.

