ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅಂಕನಹಳ್ಳಿ ಗೇಟ್ ಬಳಿ ಖಾಸಗಿ ಬಸ್ ಹರಿದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.
ಚಿಕ್ಕಾಡಿಗನಹಳ್ಳಿಯ ರವಿ(37), ಅಂಕನಹಳ್ಳಿಯ ಪ್ರಸನ್ನ(42) ಮೃತಪಟ್ಟವರು ಎಂದು ಹೇಳಲಾಗಿದೆ. ಬಿಳಿಕೆರೆ ಕಡೆಯಿಂದ ಅಂಕನಹಳ್ಳಿಗೆ ಬೈಕ್ ಸವಾರರು ತೆರಳುತ್ತಿದ್ದರು. ಮೈಸೂರು ಕಡೆಯಿಂದ ವೇಗವಾಗಿ ಬಿಳಿಕೆರೆ ಕಡೆಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಬಸ್ ಕೆಳಗೆ ಬಿದ್ದ ಇಬ್ಬರು ಬೈಕ್ ಸವಾರರ ಮೇಲೆ ಬಸ್ ಹರಿದು ಸಾವನ್ನಪ್ಪಿದ್ದಾರೆ.
ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು –ಹುಣಸೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

