ಚಂಡೀಗಢ: ದಟ್ಟವಾದ ಮಂಜು ಕವಿದಿದ್ದ ಪರಿಣಾಮ ರಸ್ತೆ ಕಾಣದೇ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಶಿಕ್ಷಕ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಪಂಜಾಬ್ ನ ಮೊಗಾದಲ್ಲಿ ನಡೆದಿದೆ.
ಜಸ್ ಕರಣ್ ಸಿಂಗ್ ಹಾಗೂ ಪತ್ನಿ ಕಮಲ್ ಜಿತ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ಇಬ್ಬರೂ ಪಂಜಾಬ್ ನ ಜಿಲ್ಲಾ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಂಗತ್ ಪುರ ಗ್ರಾಮದಿಂದ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.
ದಟ್ಟ ಮಂಜಿನಿಂದಾಗಿ ರಸ್ತೆ ಗೋಚರಿಸುತ್ತಿರಲಿಲ್ಲ. ಮುಂದಿನ ರಸ್ತೆ ಕಾಣದೇ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದೆ. ದಂಪತಿ ಕಾರಿನ ಸಮೇತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

