HomeKarnatakaBREAKING : ರೇಣುಕಾಸ್ವಾಮಿ’ ಕೊಲೆ ಕೇಸ್ ; ನಟ ದರ್ಶನ್ ಬಳಿಯಿದ್ದ 40 ಲಕ್ಷ ಹಣ...

BREAKING : ರೇಣುಕಾಸ್ವಾಮಿ’ ಕೊಲೆ ಕೇಸ್ ; ನಟ ದರ್ಶನ್ ಬಳಿಯಿದ್ದ 40 ಲಕ್ಷ ಹಣ ಜಪ್ತಿ..!

ಬೆಂಗಳೂರು : ರೇಣುಕಾಸ್ವಾಮಿ’ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಬಳಿಯಿದ್ದ 40 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣದಲ್ಲಿ ಬಚಾಚ್ ಆಗಲು ಕಾನೂನಿನ ಪ್ರಕ್ರಿಯೆಗಳನ್ನು ಎದುರಿಸಲು ನಟ ದರ್ಶನ್ 40 ಲಕ್ಷ ಹಣ ಇಟ್ಟುಕೊಂಡಿದ್ದಂತೆ. ಇದನ್ನು ಅವರ ಸ್ನೇಹಿತ ಮೋಹನ್ ರಾಜ್ ಎಂಬುವವರಿಂದ ಪಡೆದಿದ್ದರು ಎನ್ನಲಾಗಿದೆ.

ಸ್ನೇಹಿತ ಮೋಹನ್ ರಾಜ್    ಎಂಬುವವರಿಂದ ಈ ಹಣ ಪಡೆದು ದರ್ಶನ್, ಐಡಿಯಲ್ ಹೋಮ್ಸ್ನ ಮನೆಯಲ್ಲಿಇಟ್ಟಿದ್ದರು. ಜೂ.19 ರಂದು ದಾಳಿ ನಡೆಸಿದ ಪೊಲೀಸರು 37.40 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ, ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್ ಮೊಬೈಲ್ ನಲ್ಲಿ ಬಹು ಮುಖ್ಯವಾದ ಸಾಕ್ಷ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಪಟ್ಟಣಗೆರೆ ವಿನಯ್ ಮೊಬೈಲ್ ನಲ್ಲಿ ಅತಿಮುಖ್ಯ ಸಾಕ್ಷಾಧಾರ ದೊರೆತಿದೆ. ಅದನ್ನು ಕಳುಹಿಸಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ವಿನಯ್ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಬೇಕಿದ್ದು ವಿನಯ್ ನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದು, ಮನವಿ ಪುರಸ್ಕರಿಸಿದ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ರೇಣುಕಾ ಸ್ವಾಮಿ ಮೇಲೆ ದೈಹಿಕ ಹಲ್ಲೆ ಮತ್ತು ಹಲ್ಲೆಯ ನಂತರ ಮೃತಪಟ್ಟ ವಿಡಿಯೋವನ್ನು ವಿನಯ್ ಗೆ ದರ್ಶನ್ ಸಹಚರರು ಕಳುಹಿಸಿದ್ದರು ಎನ್ನಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular