HomeKarnatakaBREAKING : ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣ : ಮತ್ತೋರ್ವ ಆರೋಪಿ ಕಾರ್ತಿಕ್ ಗೌಡ...

BREAKING : ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣ : ಮತ್ತೋರ್ವ ಆರೋಪಿ ಕಾರ್ತಿಕ್ ಗೌಡ ಅರೆಸ್ಟ್..!

ಬೆಂಗಳೂರು : ಹಾಸನದ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾರ್ತಿಕ್ ಗೌಡನನ್ನು ಎಸ್ ಐ ಟಿ ಬಂಧಿಸಿದೆ.

ಅಶ್ಲೀಲ ವಿಡಿಯೋ ತುಂಬಿದ್ದ ಪೆನ್ ಡ್ರೈ ವ್ ನ್ನು ವಕೀಲ ದೇವರಾಜೇಗೌಡಗೆ ನೀಡಿದ ಆರೋಪದಲ್ಲಿ ಕಾರ್ತಿಕ್ ಗೌಡನನ್ನು ಬಂಧಿಸಲಾಗಿದೆ.

ಸದ್ಯ, ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐ ಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಇಂದು ಹಾಸನದ ಹೊಳೆನರಸೀಪುರಕ್ಕೆ ಪ್ರಜ್ವಲ್್ ರೇವಣ್ಣ ಅವರನ್ನು ಕರೆತಂದಿರುವ ಎಸ್ ಐ ಟಿ ಸ್ಥಳ ಮಹಜರು ನಡೆಸಿದೆ. ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು  ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಳೆದ ವಾರ  ಬಂಧಿಸಿ ಎಸ್ಐಟಿ ಕಚೇರಿಗೆ ಕರೆತರಲಾಗಿತ್ತು. ಸದ್ಯ, ಜೂ.10 ರವರೆಗೆ ಪ್ರಜ್ವಲ್ ರನ್ನು ಎಸ್ ಐಟಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular