ಬೆಂಗಳೂರು: UGCET -26 ಅರ್ಹತಾ ಪರೀಕ್ಷೆಯ ಅಂಕಗಳನ್ನು ಅಪ್ ಲೋಡ್ ಮಾಡದ ಕೆಲ ಅಭ್ಯರ್ಥಿಗಳ Rank ಪ್ರಕಟಣೆ ಆಗಿರುವುದಿಲ್ಲ. ಅಂತಹವರು ಕೂಡಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್ ಸೈಟ್ ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ತಮ್ಮ ಅಂಕಗಳನ್ನು ಅಪ್ ಲೋಡ್ ಮಾಡಬೇಕು.
ಅಂಕಗಳನ್ನು ದಾಖಲಿಸಿ, ಅಂಕ ಪಟ್ಟಿ ಅಪ್ ಲೋಡ್ ಮಾಡಿದ ನಂತರ ಅದರ ಆಧಾರದ ಮೇಲೆ ಐದು ದಿನಗಳ ಒಳಗೆ ಸ್ಪಾಟ್ Rank ನೀಡಲಾಗುವುದು. ಈ ವಿಷಯದಲ್ಲಿ ಗಾಬರಿಯಾಗುವ ಅಗತ್ಯ ಇಲ್ಲ.
ಸಿಬಿಎಸ್ಇ, ಐಸಿಎಸ್ಇ ಹಾಗೂ ಇತರ ರಾಜ್ಯಗಳ ಕೆಲ ಅಭ್ಯರ್ಥಿಗಳ ಅಂಕಗಳು ಆನ್ ಲೈನ್ ನಲ್ಲಿ ಕೆಇಎಗೆ ಲಭ್ಯವಾಗದ ಕಾರಣ, ಖುದ್ದು ಲಿಂಕ್ ಮೂಲಕ ದಾಖಲಿಸಲು ಹಲವು ಬಾರಿ ಅಂತಹವರಿಗೆ ಸೂಚಿಸಲಾಗಿತ್ತು. ಆದರೂ ಕೆಲವರು ಅಂಕ ಹಾಗೂ ಅಂಕ ಪಟ್ಟಿಯನ್ನು ಅಪ್ ಲೋಡ್ ಮಾಡಿಲ್ಲ. ಹೀಗಾಗಿ ಈಗ Rank ಬಂದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಅಂಕ ದಾಖಲಿಸಲು ಹಾಗೂ ಅಂಕಪಟ್ಟಿ ಅಪ್ ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://share.google/Hlty7RzxyF0vLf0qy

