HomeLatest NewsBREAKING: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಗಾಂಜಾ, ಮೊಬೈಲ್, ಸಿಗರೇಟ್, ಲೈಟರ್ ಎಸೆದ ನಾಲ್ವರು ಅರೆಸ್ಟ್

BREAKING: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಗಾಂಜಾ, ಮೊಬೈಲ್, ಸಿಗರೇಟ್, ಲೈಟರ್ ಎಸೆದ ನಾಲ್ವರು ಅರೆಸ್ಟ್

ಶಿವಮೊಗ್ಗದ ಸೋಗಾನೆಯ ಕೇಂದ್ರ ಕಾರಾಗೃಹದ ಒಳಗಡೆ ಗಾಂಜಾ, ಮೊಬೈಲ್, ಸಿಗರೇಟ್ ಹಾಗೂ ಲೈಟರ್ ಅನ್ನು ಕಪ್ಪು ಬಣ್ಣದ ಗಮ್ ಟೇಪ್ ನಿಂದ ಪ್ಯಾಕ್ ಮಾಡಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 01/02/2026 ರಂದು ಬೆಳಗಿನ ಜಾವ ಕಾರಾಗೃಹದೊಳಗೆ ನಡೆದ ಘಟನೆ ಸಂಬಂಧ ಕೇಂದ್ರ ಕಾರಾಗೃಹದ  ಅಧೀಕ್ಷಕ ಪರಮೇಶ್ ಎಚ್.ಎ. ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಈ ರೀತಿ ಎಸೆದಿದ್ದ ಮೊಬೈಲ್‌ ಫೋನ್‌, ಗಾಂಜಾ ಹಾಗೂ ಸಿಗರೇಟ್‌ ಅನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆ.

ಸದರಿ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ ಹಾಗೂ ರಮೇಶ್ ಕುಮಾರ್, ಪೊಲೀಸ್ ಉಪಾಧೀಕ್ಷಕ ಬಾಬು ಅಂಜನಪ್ಪ ಅವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಟಿ.ಗುರುರಾಜ್, ಪಿಎಸ್ಐ ಗಾದಿಲಿಂಗಪ್ಪ ಗೌಡರ್, ರಘುವೀರ, ಮಂಜಮ್ಮ ಹಾಗೂ ಠಾಣಾ ಸಿಬ್ಬಂದಿಯವರಾದ ಕರಿಬಸಪ್ಪ, ಅರುಣ್ ಕುಮಾರ್, ಕಿರಣ್ ಕುಮಾರ್, ಹರೀಶ್ ನಾಯ್ಕ್, ತಮ್ಮಣ್ಣ ಜಂಬರಗಿ, ನಾಗಪ್ಪ ಅಡಿವೆಪ್ಪನವರ್, ಬಸವರಾಜ ಪಾಳೇದ್ ನಿರಂತರ ಶ್ರಮದಿಂದ ದಿನಾಂಕ: 07/02/2026 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗದ ಸೂಳೆಬೈಲ್ ನಿವಾಸಿ ಮೊಹ್ಮದ್ ಖಲಂದರ್(23), ಬೊಮ್ಮನಕಟ್ಟೆಯ ಮುನ್ನಾ(30), ಕೋಟೆಗಂಗೂರಿನ ವಿಜಯ್(19), ಬೊಮ್ಮನಕಟ್ಟೆಯ ಪರಶುರಾಮ್(19) ಅವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಒಂದು ಬೈಕನ್ನು ಸಹ ವಶಕ್ಕೆ ಪಡಿಸಿಕೊಂಡಿದ್ದಾರೆ. 4 ಜನ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular