ಕಲಬುರಗಿ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಖಾಸಗಿ ಕ್ಲಿನಿಕ್ ಹೊತ್ತಿ ಉರಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ನಡೆದಿದೆ.
ಡಾ. ಶ್ರೀದೇವಿ ಬಿರಾದಾರ ಅವರ ಕ್ಲಿನಿಕ್ ಬೆಂಕಿ ತಗುಲಿದೆ. ಪ್ರತಿ ಶನಿವಾರ ಮಾತ್ರ ಕ್ಲಿನಿಕ್ ಓಪನ್ ಆಗುತ್ತಿತ್ತು. ಅಗ್ನಿ ಅವಘಡದಿಂದ 7-8 ಲಕ್ಷ ರೂ.ನಷ್ಟು ನಷ್ಟವಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತಾಗಿ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

